ಅಗ್ನಿಸಾಕ್ಷಿ ವಿಲನ್ ಮತ್ತೊಂದು ಸಿನಿಮಾ..’ಸತ್ಯಮಂಗಳ’ ಟೈಟಲ್ ಅನಾವರಣ ಮಾಡಿದ ತುಪ್ಪದ ಬೆಡಗಿ ರಾಗಿಣಿ

ಹೀರೋ ಅಂದ್ರೆ ಹ್ಯಾಂಡ್ಸಮ್ ಆಗಿ ಇರಬೇಕು..ಜಿಮ್ ಮಾಡಿ ಫಿಟ್ ಆಗಿ ಇರಬೇಕು. ಈ ಗುಣಗಳಿದ್ದವನೂ ಮಾತ್ರ ಹೀರೋ ಆಗೋದಿಕ್ಕೆ ಸಾಧ್ಯ ಎಂಬ ಕಾಲವೆಲ್ಲಾ ಹೋಗಿ ಆಯ್ತು. ಈಗ ಯಾರ್ ಬೇಕಾದ್ರೂ ಹೀರೋ ಆಗಬಹುದು..ಆದ್ರೆ ನಟನಾ ಪ್ರತಿಭೆ ಇರಬೇಕು ಅಷ್ಟೇ. ಈಗ ಯಾಕೆ ಈ ಮಾತು ಅಂತೀರಾ? ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಮುರುಗನಾಗಿ ಖಳನಾಯಕನ ಪಾತ್ರ ಮಾಡಿ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ಮುನಿಕೃಷ್ಣ ಮತ್ತೊಮ್ಮೆ ನಿಮ್ಮ ಮುಂದೆ ಬರ್ತಿದ್ದಾರೆ. ಕೊಡೆಮುರುಗ ಎಂಬ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಅವರೀಗ ಸತ್ಯಮಂಗಳ ಸಿನಿಮಾದಲ್ಲಿ ಹೀರೋ ಆಗಿ ಬಣ್ಣ ಹಚ್ಚಿದ್ದಾರೆ. ಮುನಿಕೃಷ್ಣಅವರನ್ನು ಹೀರೋ ಆಗಿ ಆಯ್ಕೆ ಮಾಡಿದ್ದಕ್ಕೆ ಕಾರಣ ಏನು ಅನ್ನೋದನ್ನು ನಿರ್ದೇಶಕರು ತಿಳಿಸಿದ್ದಾರೆ. ಪ್ರತಿ ಸೂಪರ್ ಸ್ಟಾರ್ ಅವರ ಮೊದಲ ಸಿನಿಮಾ ಬೆಂಬಲ ಕೊಟ್ಟಿದ್ದಕ್ಕೆ ಸ್ಟಾರ್ ಆಗಿರ್ತಾರೆ. ಅದೇ ರೀತಿ ಮುನಿಕೃಷ್ಣಅವರ ಸಿನಿಮಾ ಮೇಲಿನ ಪ್ರೀತಿ, ಡೆಡಿಕೇಷನ್ ದೊಡ್ಡದಿದೆ ಅನ್ನೋದು ನಿರ್ದೇಶಕರ ಮಾತು.

ಸತ್ಯಮಂಗಳ ಸಿನಿಮಾದ ಟೈಟಲ್ ಬಿಡುಗಡೆಯಾಗಿದೆ. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯ ಚಿಕ್ಕ ಹಳ್ಳಿಯೊಂದರಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಗಿಣಿ ವಿಶೇಷ ಅತಿಥಿಯಾಗಿ ಆಗಮಿಸಿ, ಟೈಟಲ್ ಲಾಂಚ್ ಮಾಡಿ ಇಡೀ ತಂಡಕ್ಕೆ ಶುಭ ಕೋರಿದ್ದಾರೆ. ಸತ್ಯಮಂಗಳ ಸಿನಿಮಾಗೆ ಆರ್ಯನ್ ಪ್ರತಾಪ್ ಸಾರಥಿ. ಕಾರಂಜಿ ಹಾಗೂ ಚೆಲುವೆಯೇ ನಿನ್ನ ನೋಡಲು ಚಿತ್ರಗಳಿಗೆ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿರುವ, ಕನ್ನಡ 90/11, ತಮಿಳಿನ ಹೇರ್ ಕೆನಾರ್ ಕಿರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಈ ಚಿತ್ರ ಏಳು ಅಂತರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡಿದೆ. ಮಣಿರತ್ನಂ ಸಾರಥ್ಯದ ಅಲೈ ಪಾಯುತೇ, ರಾವಣ್ ಗೆ ಅಸಿಸ್ಟೆಂಟ್ ಡೈರೆಕ್ಷರ್ ಆಗಿ, ಹಾಲಿವುಡ್ ವಿಲ್ ಸ್ಮಿತ್ ಬಳಗದಲ್ಲಿಯೂ ದುಡಿದಿರುವ ಆರ್ಯನ್ ಪ್ರತಾಪ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸತ್ಯಮಂಗಳ ಸಿನಿಮಾಗೆ ಅವ್ರೇ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಫಸ್ಟ್ ಫಿಲ್ಮಂ ಎವರ್ ಮೇಡ್ ಸ್ಕ್ರಿಪ್ಟ್ ಸೀನ್ ಸಾಹಸಕ್ಕೆ ಗಿನ್ನಿಸ್ ಬುಕ್ ರೆಕಾರ್ಡ್ ಕೂಡ ತಮ್ಮದಾಗಿಸಿಕೊಂಡಿದ್ದಾರೆ.

ಅಡ್ವೆಂಚರ್ಸ್ ಥ್ರಿಲ್ಲಿಂಗ್ ಕಹಾನಿಯ ಸತ್ಯಮಂಗಳ ಸಿನಿಮಾದಲ್ಲಿ ದಿ ಗ್ರೇಟ್ ಖಲಿ, ಬಾಲಿವುಡ್ ಅರ್ಬಾಜ್ ಖಾನ್, ಕನಕ್ ಪಾಂಡೆ, ಶರಣ್ಯ, ಸಂಜಯ್ ಕುಮಾರ್ ರವಿ ಕಹಳೆ, ವಿಜಯ್ ಚಿಂದೂರ್, ಮಂತೇಶ್ ಹಿರೇಮಠ್, ಜಿಜಿ ತಾರಾಬಳಗದಲ್ಲಿದ್ದಾರೆ. ಹೂವಿನ ಹಡಗಲಿ ಶಾಸಕರಾದ ಕೃಷ್ಣ ನಾಯಕ್ ಅರ್ಪಿಸ್ತಿರುವ ಈ ಚಿತ್ರವನ್ನು ASA ಪ್ರೊಡಕ್ಷನ್ ಮತ್ತು ಐರಾ ಪ್ರೊಡಕ್ಷನ್ ನಡಿ ಶಂಕರ್ ಬಿ ಹಾಗೂ ಮುನಿಕೃಷ್ಣ ನಿರ್ಮಾಣ ಮಾಡುತ್ತಿದ್ದಾರೆ. ಚಂದ್ರಶೇಖರ್ ಕೆಎಸ್ ಕ್ಯಾಮೆರಾ, ವೀರ್ ಸಮರ್ಥ್ ಸಂಗೀತ, ಎಂಎನ್ ವಿಶ್ವ ಸಂಕಲನ, ಪೀಟರ್ ಹೈನ್ಸ್ ಸ್ಟಂಟ್, ಚಿನ್ನಿ ಪ್ರಕಾಶ್ ನೃತ್ಯ ಸಂಯೋಜನೆ ಚಿತ್ರಕ್ಕಿದೆ.

ಸತ್ಯಮಂಗಳ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿದ್ದು, ದಾಂಡೇಲಿ, ಮಲೆ ಮಹಾದೇಶ್ವರ ಬೆಟ್ಟ, ಶ್ರೀಲಂಕಾ, ಕಟ್ಮುಂಡು, ಬ್ಯಾಂಕಕ್ ಭಾಗದಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ. ಈಗಾಗಲೇ ಚಿತ್ರತಂಡ 10 ದಿನಗಳ ಕಾಲ ಬ್ಯಾಂಕಕ್ ನಲ್ಲಿ ಶೂಟಿಂಗ್ ಮುಗಿಸಿಕೊಂಡು ಬಂದಿದೆ. ವಿಶೇಷ ಅಂದರೆ ಸತ್ಯಮಂಗಳ ಸಿನಿಮಾದಲ್ಲಿ ಪಾಂಡಿಚೇರಿ ಮುಖ್ಯಮಂತ್ರಿ ಎನ್,. ರಂಗಸ್ವಾಮಿ ನಟಿಸಿದ್ದಾರೆ. ಯಾವ ಪಾತ್ರ ಅನ್ನೋದನ್ನು ಚಿತ್ರತಂಡ ಗುಟ್ಟುಬಿಟ್ಟು ಕೊಟ್ಟಿಲ್ಲ.

Loading

Leave a Reply

Your email address will not be published. Required fields are marked *