ಬೆಂಗಳೂರು: ಮದುವೆಯಾಗಿ 2 ಮಕ್ಕಳಾದ ಮೇಲೆ ಹೆಂಡತಿ ಬೇಡವೆಂದು ಮನೆಯಿಂದ ಹೊರಹಾಕಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಹನುಮಂತನಗರದಲ್ಲಿ ನಡೆದಿದೆ. ಹೌದು .. ಏನಾಪ್ಪ ಅಂದ್ರೆ ಈತ ಇಬ್ಬರ ಹೆಂಡತಿಯ ಮುದ್ದಿನ ಗಂಡನಾಗಿದ್ದು ಎರಡನೇ ಹೆಂಡತಿ ಜೊತೆ ಸಂಸಾರ ನಡೆಸಿ ಇಬ್ಬರು ಮಕ್ಕಳನ್ನು ಮಾಡಿಕೊಂಡು ಈಗ ನನಗೆ ನೀನು ಬೇಡ ಎಂದು ಹೊರದಬ್ಬುತ್ತಿರುವ ಘಟನೆ ಸಿಸಿಟಿಯಲ್ಲಿ ಸೆರೆಯಾಗಿದೆ.
ಮನೆ ಬಿಟ್ಟು ಹೋಗು ಎಂದು ಹೆಂಡತಿಗೆ ಒತ್ತಾಯ ಮಾಡುತ್ತಿದ್ದು ಅದೇ ವೇಳೆ ಇದನ್ನ ಪ್ರಶ್ನಿಸಿದ ಹೆಂಡತಿಗೆ ಮೊದಲನೇ ಹೆಂಡತಿ ಮಗನಿಂದ ಹಲ್ಲೆ ಕೂಡ ಮಾಡಲಾಗಿದೆ ಹಾಗೆ ಬಿಡಿಸಕ್ಕೆ ಹೋದ ಚಿಕ್ಕಪ್ಪನ ಮೇಲೂ ರಾಡ್ ನಿಂದ ಹಲ್ಲೆ ಕೂಡ ನಡೆಸಲಾಗಿದೆ.ಸೆಪ್ಟಂಬರ್ 6 ರಂದು ನಡೆದಿರುವ ಘಟನೆಯಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ,
ಸುರೇಶ್ ಎಂಬಾತ ಆರತಿ ಹಾಗೂ ಸರಸ್ವತಿ ಎಂಬುವ ಇಬ್ಬರನ್ನ ಮದುವೆಯಾಗಿದ್ದ. ಎರಡನೇ ಹೆಂಡತಿ ಇಬ್ಬರು ಮಕ್ಕಳು ಇದ್ದಾರೆ.ಆಸ್ತಿಗಾಗಿ ಎರಡನೇ ಮದುವೆಯಾಗಿದ್ದ ಸುರೇಶ್..ಇದೀಗ ಎರಡನೇ ಹೆಂಡತಿಯನ್ನ ಮನೆಬಿಟ್ಟೋಗುವಂತೆ ಹಲ್ಲೆ.ಎರಡು ಮದುವೆಯಾಗಿ ಒಂದು ಬಿಲ್ಡಿಂಗ್ ಬೇರೆ ಮನೆಯಲ್ಲಿ ಇಟ್ಟಿದ್ದ. ಇತ್ತೀಚೆಗೆ ಮನೆ ಬಿಟ್ಟೋಗುವಂತೆ ವಿಪರೀತ ಕಿರಿಕ್ ನಡೆದಿತ್ತು. ಮೊದಲನೇ ಹೆಂಡತಿ ಹಾಗೂ ಮಕ್ಕಳಿಂದ ಕಿರಿಕ್ ಜಾಸ್ತಿಯಾಗಿತ್ತು= ಇದನ್ನ ಪ್ರಶ್ನೆ ಮಾಡಿದ್ದ ಎರಡನೇ ಹೆಂಡತಿ ಸರಸ್ವತಿ ಈ ವೇಳೆ ಸುರೇಶ ಮೊದಲ ಹೆಂಡತಿ ಮಗ ವರ್ಷಿತ್ ನಿಂದ ಹಲ್ಲೆ ಈ ವೇಳೆ ಜಗಳ ಬಿಡಿಸಲು ಹೋಗಿದ್ದ ಸುರೇಶ್ ತಮ್ಮ ಶ್ರೀನಿವಾಸ್ ಗೂ ಹಲ್ಲೆ ಮಾಡಲಾಗಿದೆ.
ಹಲ್ಲೆಯಿಂದಾಗಿ ಶ್ರೀನಿವಾಸ್ ದವಡೆಗೆ ಗಾಯವಾಗಿದ್ದು ಹಲ್ಲೆ ಮಾಡಿರುವ ದೃಶ್ಯಾವಳಿ ಸಹ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದೂರು ದಾಖಲಿಸಿದರೂ ಪೊಲೀಸರಿಂದ ನಿರ್ಲಕ್ಷ ಆರೋಪ ಎಂದು ಎರಡನೇ ಹೆಂಡತಿ ಸರಸ್ವತಿಯಿಂದ ಕೊತ್ತನೂರು ಪೊಲೀಸರ ಮೇಲೆ ಆರೋಪ ಮಾಡಿದ್ದು ಈಗ ಪ್ರಕರಣ ದಾಖಲಿಸಿ ಠಾಣೆಗೆ ಅಲೆಸುತ್ತಿದ್ದಾರೆ ಎಂದು ಮತ್ತೊಂದು ಪೊಲೀಸರ ಮೇಲೆ ಆರೋಪ ಮಾಡಲಾಗಿದೆ.