ಪ್ರಯಾಣಿಕರ ಅನಕೂಲಕ್ಕಾಗಿ ಬಿಎಂಟಿಸಿಯಿಂದ ಹೆಚ್ಚುವರಿ ಬಸ್.!

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಪಾರ್ಟಿ ಮುಗಿಸಿ ತೆರಳುವ ಜನರಿಗಾಗಿಯೇ ಬಿಎಂಟಿಸಿ ಡಿಸೆಂಬರ್ 31ರಂದು ವಿಶೇಷ ಬಸ್‌ಗಳನ್ನು ಓಡಿಸುತ್ತಿದೆ.

ಬಿಎಂಟಿಸಿ  ಎಂ. ಜಿ. ರಸ್ತೆ/ ಬ್ರಿಗೇಡ್ ರಸ್ತೆಯಿಂದ ವಿವಿಧ ಪ್ರದೇಶಗಳಿಗೆ ಈ ವಿಶೇಷ ಬಸ್‌ಗಳು ಸಂಚಾರ ನಡೆಸಲಿವೆ. ಡಿಸೆಂಬರ್ 31ರ ರಾತ್ರಿ 11 ಗಂಟೆಯಿಂದ ಜನವರಿ 1ರ 2 ಗಂಟೆಯ ತನಕ ಬಸ್‌ಗಳು ಸಂಚಾರ ನಡೆಸಲಿವೆ.

ಬಿಎಂಟಿಸಿ ಡಿಸೆಂಬರ್ 31ರಂದು ಎಂ. ಜಿ. ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ಭಾಗವಹಿಸುವ ಜನರಿಗೆ ಅನುಕೂಲವಾಗುವಂತೆ ಬೇಡಿಕೆಗೆ ಅನುಗುಣವಾಗಿ ಬಿಎಂಟಿಸಿ ವಿಶೇಷ ಬಸ್‌ಗಳನ್ನು ಓಡಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಲ್ಲದೇ ಜನದಟ್ಟಣೆ ಇರುವ ಪ್ರಮುಖ ಬಸ್ ನಿಲ್ದಾಣ/ ಜಂಕ್ಷನ್‌ಗಳಾದ ಯಲಹಂಕ, ಇಂದಿರಾನಗರ, ಕೋರಮಂಗಲ, ಶಾಂತಿನಗರ, ಬನಶಂಕರಿ, ಜಯನಗರ, ಸುಮನಹಳ್ಳಿ, ಗೊರಗುಂಟೆಪಾಳ್ಯ, ಕಾಡುಗೋಡಿ, ನಾಗಸಂದ್ರ, ಹೆಬ್ಬಾಳ, ಸೆಂಟ್ರಲ್ ಸಿಲ್ಕ್ ಬೋರ್ಡ್‌ ಗಳಿಂದಲೂ ಬಸ್ ಸಂಚಾರಕ್ಕೆ ಬಿಎಂಟಿಸಿ ಕ್ರಮ ಕೈಗೊಂಡಿದೆ.

ಬಸ್ ಮಾರ್ಗ, ಸಂಖ್ಯೆಗಳು ಈ ರೀತಿ ಇವೆ.

 

* ಎಂ. ಜಿ. ರಸ್ತೆ/ ಬ್ರಿಗೇಡ್ ರಸ್ತೆಯಿಂದ ಎಸ್. ಬಿ. ಎಸ್‌-1ಕೆ: ಕಾಡುಗೋಡಿ ಬಸ್ ನಿಲ್ದಾಣ (ಹೆಚ್‌. ಎ. ಎಲ್‌. ರಸ್ತೆ)

* ಎಸ್‌. ಬಿ. ಎಸ್‌-13ಕೆ: ಕಾಡುಗೋಡಿ ಬಸ್ ನಿಲ್ದಾಣ (ಹೂಡಿ ರಸ್ತೆ)

 

* ಜಿ-2; ಎಂ. ಜಿ. ರಸ್ತೆ/ ಬ್ರಿಗೇಡ್ ರಸ್ತೆ- ಸರ್ಜಾಪುರ

 

* ಜಿ-3: ಎಂ. ಜಿ. ರಸ್ತೆ/ ಬ್ರಿಗೇಡ್ ರಸ್ತೆ- ಎಲೆಕ್ಟ್ರಾನಿಕ್ ಸಿಟಿ (ಹೊಸೂರು ರಸ್ತೆ)

 

* ಜಿ-4; ಎಂ. ಜಿ. ರಸ್ತೆ/ ಬ್ರಿಗೇಡ್ ರಸ್ತೆ- ಬನ್ನೇರುಘಟ್ಟ ಮೃಗಾಲಯ

 

* ಜಿ-6: ಎಂ. ಜಿ. ರಸ್ತೆ/ ಬ್ರಿಗೇಡ್ ರಸ್ತೆ- ಕೆಂಗೇರಿ ಕೆ. ಹೆಚ್. ಬಿ.ಕ್ವಾರ್ಟರ್ಸ್ (ಎಂ. ಸಿ. ಟಿ. ಸಿ. ನಾಯಂಡಹಳ್ಳಿ).

 

* ಜಿ-7: ಎಂ. ಜಿ. ರಸ್ತೆ/ ಬ್ರಿಗೇಡ್ ರಸ್ತೆ – ಜನಪ್ರಿಯ ಟೌನ್ ಶಿಪ್ (ಮಾಗಡಿ ರಸ್ತೆ)

* ಜಿ-8: ಎಂ. ಜಿ. ರಸ್ತೆ/ ಬ್ರಿಗೇಡ್ ರಸ್ತೆ- ನೆಲಮಂಗಲ

 

* ಜಿ-9: ಎಂ. ಜಿ. ರಸ್ತೆ/ ಬ್ರಿಗೇಡ್ ರಸ್ತೆ- ಯಲಹಂಕ 5ನೇಹಂತ

 

* ಜಿ-10; ಎಂ. ಜಿ. ರಸ್ತೆ/ ಬ್ರಿಗೇಡ್ ರಸ್ತೆ – ಆರ್. ಕೆ. ಹೆಗಡೆ ನಗರ (ನಾಗವಾರ, ಟ್ಯಾನರಿ ರಸ್ತೆ)

 

* ಜಿ-11: ಎಂ. ಜಿ. ರಸ್ತೆ/ ಬ್ರಿಗೇಡ್ ರಸ್ತೆ- ಬಾಗಲೂರು (ಹೆಣ್ಣೂರು ರಸ್ತೆ)

 

* 317-ಜಿ: ಎಂ. ಜಿ. ರಸ್ತೆ/ ಬ್ರಿಗೇಡ್ ರಸ್ತೆ – ಹೊಸಕೋಟೆ

Loading

Leave a Reply

Your email address will not be published. Required fields are marked *