ಬಾಲಿವುಡ್ ಚಿತ್ರರಂಗದ ವಿವಾದಿತ ತಾರೆ ನಟಿ ರಾಖಿ ಸಾವಂತ್ ನಿತ್ಯ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೆ ಇರುತ್ತಾರೆ. ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತು ಹೇಳಿಕೆ ನೀಡಿರುವ ರಾಖಿ ರಾಹುಲ್ ಬಿಗ್ ಬಾಸ್ ಶೋಗೆ ಹೋದರೆ ಪ್ರಧಾನಿ ಆಗ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ .
ರಾಹುಲ್ ಗಾಂಧಿ ಪ್ರಧಾನಿ ಆಗಬೇಕು ಎನ್ನುವುದು ಕಾಂಗ್ರೆಸ್ಸಿಗರ ಕನಸು ಮಾತ್ರವಲ್ಲ, ನಟಿ ರಾಖಿ ಸಾವಂತ್ ಕೂಡ ಅಂಥದ್ದೇ ಕನಸು ಕಂಡಿದ್ದಾರೆ. ಹಾಗಾಗಿಯೇ ರಾಹುಲ್ ಪ್ರಧಾನಿ ಆಗಬೇಕು ಎಂದರೆ ಅವರು ಬಿಗ್ ಬಾಸ್ ಮನೆಗೆ ಹೋಗಬೇಕು. ಬಿಗ್ ಬಾಸ್ ಗೆ ಹೋದರೆ ರಾಹುಲ್ ಮತ್ತಷ್ಟು ಪಾಪ್ಯುಲರ್ ಆಗುತ್ತಾರೆ. ಆನಂತರ ಪ್ರಧಾನಿ ಕೂಡ ಆಗಬಹುದು ಎಂದು ರಾಖಿ ಬರೆದುಕೊಂಡಿದ್ದಾರೆ.
ಇನ್ನೂ ರಾಖಿ ಸಾವಂತ್ ಉದ್ಯಮಿ ಆದಿಲ್ ನನ್ನು ಮದುವೆಯಾಗಿದ್ದು ಇದೀಗ ಪತಿಯನ್ನು ಜೈಲಿಗೆ ಕಳುಹಿಸಿದ್ದಾರೆ. ಜೈಲಿನಿಂದ ಅವನು ಮೆಸೇಜ್ ಕಳುಹಿಸಿರುವ ಕುರಿತು ಮಾತನಾಡಿದ್ದು, ಆತನ ವಿರುದ್ಧ ಮತ್ತಷ್ಟು ಆರೋಪಗಳನ್ನೂ ಮಾಡಿದ್ದಾರೆ. ಮತ್ತೆಂದೂ ತಾವು ಮದುವೆ ಆಗುವುದಿಲ್ಲ ಎಂದು ಹೇಳಿರುವ ರಾಖಿ, ಆದಿಲ್ ಗೆ ಬುದ್ಧಿ ಕಲಿಸದೇ ಬಿಡುವುದಿಲ್ಲ ಎಂದಿದ್ದಾರೆ .