ಬೆಂಗಳೂರು : ಚುನಾವಣೆ ವೇಳೆ ತಮ್ಮ ಟ್ವೀಟ್ ಮೂಲಕ ಸುದ್ದಿಯಾಗಿದ್ದ ನಟ ಉಪೇಂದ್ರ ಚುನಾವಣಾ ಫಲಿತಾಂಶ ಬಂದ ಬಳಿಕ ಮೌನವಹಿಸಿದ್ದರು. ಇದೀಗ ಮತ್ತೊಂದು ಟ್ವೀಟ್ ಮೂಲಕ ಗಮನ ಸೆಳೆದಿದ್ದಾರೆ.
ಒಗಟು ಒಗಟಾಗಿ ಟ್ವೀಟ್ ಮಾಡಿರುವ ನಟ ಉಪೇಂದ್ರ ಒಂದು ದೊಡ್ಡ ಕಲ್ಲು ರಸ್ತೆಗೆ ಅಡ್ಡವಾಗಿ ಬಿದ್ದಿದೆ, ಅದನ್ನು ಎತ್ತಲು ಹತ್ತು ಜನ ಬೇಕು, ಅದನ್ನು ನಾವೆಲ್ಲಾ ಸೇರಿ ತೆಗೆಯೋಣ ಎಂದರೆ..
‘ ನೀವು ಎತ್ತಿ ತೋರಿಸಿ ನಾವು ಜೊತೆ ಸೇರುತ್ತೇವೆ ಎನ್ನುತ್ತಿದ್ದಾರೆ.. ‘ ಏನು ಮಾಡುವುದು ? ಜನಸಾಮಾನ್ಯ್ಯ ಅಲ್ಲ ಅಲ್ಲ.. ಜನ ಅಸಾಮಾನ್ಯರು ತಿಳಿಸಿ. ಎಂದು ಟ್ವೀಟ್ ಮಾಡಿದ್ದಾರೆ.
ಮತ ಎಣಿಕೆಗೆ 2 ದಿನಾ ಬೇಕಾ ಎಂದಿದ್ದ ಉಪೇಂದ್ರ
ಈ ಹಿಂದೆ ಮತ ಎಣಿಕೆಗೆ 2 ದಿನಾ ಬೇಕಾ ಎಂದು ನಟ ಉಪೇಂದ್ರ ಟ್ವೀಟ್ ಮಾಡಿದ್ದರು. ಮತ ಎಣಿಕೆಗೆ 2 ದಿನಾ ಬೇಕಾ ? ಡಿಜಿಟಲ್ ವೋಟಿಂಗ್ ಅಲ್ವಾ ? ಮತ ಎಣಿಕೆಗೆ 2 ದಿನಾ ಬೇಕಾ ? ನನಗೆ ಗೊತ್ತಿಲ್ಲಾ, ಗೊತ್ತಿದ್ದರೆ ತಿಳಿಸಿ ಅಂದೆ ಅಷ್ಟೇ.. ಅಬ್ಬಬ್ಬಾ ಏನು ಕಾಮೆಂಟ್ಸ್ ಗಳು ?! ವಾರೆ ವಾಹ್ . ವ್ಯಾಪಾರೀ ರಾಜಕೀಯ, ಭ್ರಷ್ಟಾಚಾರ, ಕುದುರೆ ವ್ಯಾಪಾರ ಇದರ ಬಗ್ಗೆ ಕಾಮೆಂಟ್ ಮಾಡಿ ನೋಡೋಣ ಅತಿ ಬುದ್ವಂತ್ರು, ದೇಶ ಪ್ರೇಮಿಗಳು, ರಾಜಕೀಯ ಪಕ್ಷಗಳ ಹಿಂ ಬಾಲಕರು..ಎಂದು ನಟ ಉಪೇಂದ್ರ ಟ್ವೀಟ್ ಮಾಡಿದ್ದರು.