ಬೆಂಗಳೂರು: ಸಿಲಿಕಾನ್ ಸಿಟಿಗೆ ಇಂದು ಸೂಪರ್ ಸ್ಟಾರ್ ರಜನಿಕಾಂತ್ ಬಂದಿಳಿದಿದ್ದು ಎಲ್ಲಾ ಅಭಿಮಾನಿಗಳಿಗೆ ಫುಲ್ ಖುಷಿಯಾಗಿದೆ. ಅಭಿಮಾನಿಗಳಲ್ಲಿ ಸಂಭ್ರಮದ ವಾತಾವರಣ ಕಂಡಿದ್ದು ಎಲ್ಲರು ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದರು. ಜಯನಗರದಲ್ಲಿ ಸ್ವಲ್ಪ ಹೊತ್ತು ರೌಂಡ್ಸ್ ಹೊಡೆದು ಅಲ್ಲಿಂದ ತಮ್ಮ ಹಳೆಯ ಏರಿಯಾ ಚಾಮರಾಜಪೇಟೆಗೆ ಭೇಟಿ ಕೊಟ್ಟರು. ಆ ನಂತರ ರಾಯರ ಮಠಕ್ಕೂ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದುಕೊಂಡರು.
ಜಯನಗರದ ಬಿಎಂಟಿಸಿ ಡಿಪೋಗೆ ರಜನಿಕಾಂತ್ ಭೇಟಿ ನೀಡಿ ತಮ್ಮ ಹಳೆಯ ದಿನಗಳನ್ನು ಅಲ್ಲಿನ ಸಿಬ್ಬಂದಿ ಜೊತೆ ಮೆಲುಕು ಹಾಕಿದರು.ಹೀರೋ ಆಗೋಕೂ ಮುಂಚೆ ರಜನಿ ಕಂಡಕ್ಟರ್ ಆಗಿದ್ದು ಹನುಮಂತನಗರ ರೂಟ್ ಕಂಡೆಕ್ಟರ್ ಆಗಿದ್ದ ರಜನಿಕಾಂತ್ ಇಂದು ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ರಜನಿಕಾಂತ್ ಇಂದು ಬೆಳಗ್ಗೆ ಬೆಂಗಳೂರಿಗೆ ಲಗ್ಗೆ ಇಟ್ಟಿರುವ ನಟ ರಜನಿಕಾಂತ್ ತತಮ್ಮ ಹಳೆ ಗೆಳೆಯರನ್ನು ಭೇಟಿಯಾಗಲು ರಜನಿಕಾಂತ್ ಪ್ಲಾನ್ ಮಾಡಿದ್ದಾರೆ ನೋಡೋಣ ಯಾರನ್ನೆಲ್ಲಾ ಭೇಟಿ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.