ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ ನಟ ನಿಖಿಲ್ ಕುಮಾರಸ್ವಾಮಿ

ಕರ್ನಾಟಕ ವಿಧಾನಸಭೆ ಚುನಾವಣಾ ಹಿನ್ನೆಲೆಯಲ್ಲಿ ಚಿತ್ರರಂಗದಿಂದ ದೂರವಿದ್ದು, ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದ ನಟ ನಿಖಿಲ್ ಕುಮಾರಸ್ವಾಮಿ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದಾರೆ.
ಚುನಾವಣೆ ಆರಂಭಕ್ಕೂ ಮುನ್ನ ನಿಖಿಲ್ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು.
ಆದರೆ ಎರಡು ಸಿನಿಮಾಗಳ ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ನೀಡಿರಲಿಲ್ಲ. ತಮ್ಮನ್ನು ಸಂಪೂರ್ಣವಾಗಿ ಪಕ್ಷ ಸಂಘಟಿಸಲು ನಿಯೋಜಿಸಿಕೊಂಡಿದ್ದು ನಿಖಿಲ್ ಇದೀಗ ಚುನಾವಣೆ ಮುಗಿದ ಹಿನ್ನೆಲೆಯಲ್ಲಿ ಚಿತ್ರೀಕರಣದತ್ತ ಮುಖ ಮಾಡಿದ್ದಾರೆ.
2021ರಲ್ಲಿ ತೆರೆಕಂಡ ರೈಡರ್ ಸಿನಿಮಾದ ಬಳಿಕ ನಿಖಿಲ್ ಯಾವುದೇ ಸಿನಿಮಾಗಳಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ ಧನುಷ್ ಹಾಗೂ ಯದುವೀರ ಹೆಸರಿನ ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಇದೀಗ ಚುನಾವಣೆ ಮುಗಿದಿರುವ ಹಿನ್ನೆಲೆಯಲ್ಲಿ ನಿಖಿಲ್ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಈ ಮಧ್ಯೆ ಮತ್ತೊಂದು ಹೆಸರಾಂತ ಸಂಸ್ಥೆ ನಿಖಿಲ್ ಚಿತ್ರ ಮಾಡಲು ಮುಂದಾಗಿದೆ ಎನ್ನಲಾಗುತ್ತಿದೆ.
ದಕ್ಷಿಣ ಭಾರತದ ಶ್ರೀಮಂತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಇದೀಗ ನಿಖಿಲ್ ಅವರ ಸಿನಿಮಾವನ್ನು ನಿರ್ಮಾಣ ಮಾಡಲು ಮುಂದೆ ಬಂದಿದೆ. ಈಗಾಗಲೇ ನಿಖಿಲ್ ಜೊತೆ ಮಾತುಕತೆ ಮುಗಿದಿದ್ದು ಚಿತ್ರದಲ್ಲಿ ನಟಿಸಲು ನಿಖಿಲ್ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ನಿಖಿಲ್ ಆಗಲಿ, ಲೈಕಾ ಪ್ರೊಡಕ್ಷನ್ ಆಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ನಿಖಿಲ್ ಬಿಗ್ ಬಜೆಟ್ ನ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದ್ದರು ಅವರಿಗೆ ಹೇಳಿಕೊಳ್ಳುವಂತ ಬ್ರೇಕ್ ಸಿಕ್ಕಿಲ್ಲ. ಹೀಗಾಗಿ ನಿಖಿಲ್ ಕೂಡ ಒಂದೊಳ್ಳೆ ಬ್ರೇಕ್ ಗಾಗಿ ಕಾಯುತ್ತಿದ್ದು ಸದ್ಯ ನಿಖಿಲ್ ಒಪ್ಪಿಕೊಂಡಿರುವ ಚಿತ್ರಗಳು ಅವರ ಕೈ ಹಿಡಿಯುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

Loading

Leave a Reply

Your email address will not be published. Required fields are marked *