ಸೆಲೆಬ್ರಿಟಿಗಳು ಅಂದ್ರೆ ಅವರ ಬಳಿ ಸಾಕಷ್ಟು ಕಾರುಗಳ ಸಂಗ್ರಹವೇ ಇರುತ್ತದೆ. ಆದರೂ ಕೂಡ ಅವರ ಕಾರ್ ಪಾರ್ಕಿಂಗ್ ಗೆ ಆಗಾಗ ಹೊಸ ಹೊಸ ಕಾರುಗಳು ಬರುತ್ತಲೆ ಇರುತ್ತವೆ. ಇದೀಗ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ದುಬಾರಿ ಕಾರಿನ ಒಡೆಯನಾಗಿದ್ದಾರೆ.
ಟಾಲಿವುಡ್ನಲ್ಲಿ ಸಖತ್ ಬೇಡಿಕೆ ಹೊಂದಿರುವ ನಟ ಮಹೇಶ್ ಬಾಬು ಸದ್ಯ ‘ಗುಂಟೂರುಖಾರಂ‘ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ಹೊಸ ಕಾರು ಖರೀದಿಸುವ ಮೂಲಕ ಸುದ್ದಿ ಆಗಿದ್ದಾರೆ. ಅಂದಹಾಗೆ, ಮಹೇಶ್ ಬಾಬು ಗೋಲ್ಡ್ ಕಲರ್ನ ರೇಂಜ್ ರೋವರ್ ಕಾರು ಖರೀದಿಸಿದ್ದು ಸದ್ಯ ಕಾರಿನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂದ ಹಾಗೆ ಈ ಕಾರಿನ ಬೆಲೆ ಬರೋಬ್ಬರಿ 5.4 ಕೋಟಿ ರೂಪಾಯಿ ಎನ್ನಲಾಗುತ್ತಿದೆ.
ಕೆಲವೇ ದಿನಗಳ ಹಿಂದೆ ‘ರಾಕಿಂಗ್ ಸ್ಟಾರ್’ ಯಶ್ ಕೂಡ ರೇಂಜ್ ರೋವರ್ ಕಾರು ಖರೀದಿಸಿದ್ದರು. ಕಪ್ಪು ಬಣ್ಣದ ರೇಂಜ್ ರೋವರ್ ಕಾರಿನ ಜೊತೆ ಅವರು ಪೋಸ್ ನೀಡಿದ್ದ ಫೋಟೋ ವೈರಲ್ ಆಗಿತ್ತು. ಈಗ ‘ಪ್ರಿನ್ಸ್’ ಮಹೇಶ್ ಬಾಬು ಕೂಡ ರೇಂಜ್ ರೋವರ್ ಕಾರು ಖರೀದಿಸಿದ್ದಾರೆ. ಹಲವು ವರ್ಷಗಳಿಂದ ಅವರು ಚಿತ್ರರಂಗದಲ್ಲಿ ಇದ್ದಾರೆ. ಪ್ರತಿ ಸಿನಿಮಾಗೆ ಅವರು ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅದಕ್ಕೆ ತಕ್ಕಂತೆಯೇ ಅವರ ಲೈಫ್ ಸ್ಟೈಲ್ ಇದೆ. ಈಗ ಅವರ ಕಾರ್ ಕಲೆಕ್ಷನ್ಗೆ ರೇಂಜ್ ರೋವರ್ ಸೇರ್ಪಡೆ ಆಗಿದೆ. ಅನೇಕ ಐಷಾರಾಮಿ ಸೌಲಭ್ಯಗಳು ಈ ಕಾರಿನಲ್ಲಿ ಇವೆ. ಮೋಹನ್ಲಾಲ್, ಜೂನಿಯರ್ ಎನ್ಟಿಆರ್, ಚಿರಂಜೀವಿ ಮುಂತಾದ ಸ್ಟಾರ್ ನಟರ ಬಳಿಯೂ ಈ ಕಾರ್ ಇದೆ.
ಸದ್ಯ ಮಹೇಶ್ ಬಾಬು ತ್ರಿವಿಕ್ರಮ್ ನಿರ್ದೇಶನದ ‘ಗುಂಟೂರು ಖಾರಂ’ ಸಿನಿಮಾದಲ್ಲಿ ನಟಿಸುತ್ತಿದ್ದು ಇತ್ತೀಚೆಗಷ್ಟೇ ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿತ್ತು. ಚಿತ್ರದಲ್ಲಿ ಈ ಹಿಂದೆ ನಟಿ ಪೂಜಾ ಹೆಗ್ಡೆ ನಟಿಸುತ್ತಾರೆ ಎಂಬ ಸುದ್ದಿ ಹೊರ ಬಿದ್ದಿತ್ತು, ಆದರೆ ಇದೀಗ ಡೇಟ್ಸ್ ಹೊಂದಾಣಿಕೆ ಆಗದ ಕಾರಣದಿಂದಾಗಿ ಚಿತ್ರತಂಡಕ್ಕೆ ಕನ್ನಡದ ನಟಿ ಶ್ರೀಲೀಲಾ ಎಂಟ್ರಿಕೊಟ್ಟಿದ್ದಾರೆ.