ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅದ್ದೂರಿ ಪ್ರಚಾರಕ್ಕೆ ನಟ ದರ್ಶನ್ ಕೂಡ ಭರ್ಜರಿಯಾಗಿಯೇ ಸಾಥ್ ನೀಡಿದರು.
ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರವಾಗಿ ರೋಡ್ ಶೋ ಮೂಲಕ ಪ್ರಚಾರವನ್ನು ಆರಂಭಿಸಿದ ನಟ ದರ್ಶನ್, ಮುನಿರತ್ನ ಪರವಾಗಿ ಮಾತನಾಡಿದರು.
ಬೆಂಗಳೂರಿನಲ್ಲಿಯೇ ಪ್ರಚಾರ ಮಾಡುತ್ತಿರುವುದಕ್ಕೆ ಭಾರಿ ಖುಷಿಯಾಗಿದೆ. ಇನ್ನು ಮುನಿರತ್ನ ಗೆಲ್ಲುವುದು, ನಾನು ಗೆಲ್ಲುವುದು ಎರಡೂ ಒಂದೇ ಆಗಿದೆ.
ಮುನಿ ಗೆದ್ದರೆ ನಾನು ಗೆದ್ದಂಗೆ, ಅವರನ್ನು ಗೆಲ್ಲಿಸಬೇಕು. ಗೆದ್ದೇ ಗೆಲ್ಲುವೆವು ಒಂದು ದಿನ, ಗೆದ್ದೇ ಗೆಲ್ಲುತ್ತೆ ಒಳ್ಳೆತನ. ಮುನಿರತ್ನ ಗೆಲುವಿಗೆ ಅವರ ಕೆಲಸಗಳೇ ಕಾರಣ ಎಂದು ಹೇಳಿದರು.