ಜನವರಿ 13ಕ್ಕೆ ಮುಂಬೈನಲ್ಲಿ ನಟ ಆಮೀರ್ ಖಾನ್ ಪುತ್ರಿ ಆರತಕ್ಷತೆ!

ರಡು ದಿನಗಳ ಹಿಂದೆಯಷ್ಟೇ ಪುತ್ರಿ ಇರಾ ಖಾನ್ ಮದುವೆ ಮಾಡಿರುವ ಬಾಲಿವುಡ್ ನಟ ಆಮೀರ್ ಖಾನ್ (Aamir Khan), ಇದೀಗ ಮುಂಬೈನಲ್ಲಿ ಆರತಕ್ಷತೆ (Reception) ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಮಗಳ ಮದುವೆಗೆ ಕೆಲವೇ ಕೆಲವು ಗಣ್ಯರನ್ನು ಆಮೀರ್ ಆಮಂತ್ರಿಸಿದ್ದರು.

ಜೊತೆಗೆ ಎರಡೂ ಕುಟುಂಬಗಳ ಸದಸ್ಯರು ಇದ್ದರು. ಆದರೆ, ಆರತಕ್ಷತೆಯಲ್ಲಿ ಭಾರತೀಯ ಸಿನಿಮಾ ರಂಗದ ನಾನಾ ದಿಗ್ಗಜರು ಭಾಗಿ ಆಗಲಿದ್ದಾರಂತೆ.

ಜನವರಿ 13ಕ್ಕೆ ಅದ್ಧೂರಿಯಾಗಿಯೇ ಮಗಳ ಆರತಕ್ಷತೆ ಕಾರ್ಯಕ್ರಮವನ್ನು ಆಮೀರ್ ಆಯೋಜನೆ ಮಾಡಿದ್ದಾರಂತೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಜೊತೆಗೆ ಬಾಲಿವುಡ್ ನ ಬಹುತೇಕ ಸ್ಟಾರ್ ನಟರು ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.

ಜನವರಿ 3ರಂದು ಇರಾ ಖಾನ್ ಮದುವೆಯಾಗಿದೆ. ಇರಾ ಖಾನ್ (Ira Khan) ಮತ್ತು ನೂಪುರ್ ಶಿಖಾರೆ (Nupur Shikhare) ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ. ಫೋಟೋ ವೈರಲ್ ಆಗಲು ಕಾರಣ, ನೂಪುರ್ ಧರಿಸಿರುವ ಕಾಸ್ಟ್ಯೂಮ್

ಸಾಮಾನ್ಯವಾಗಿ ಮದುವೆಯಲ್ಲಿ ಲಕ್ಷಾಂತರ ಬೆಲೆ ಬಾಳು ಸೂಟ್ ಧರಿಸೋದು ವಾಡಿಕೆ. ಆದರೆ, ಮದುವೆಯ ಸಂದರ್ಭದಲ್ಲಿ ನೂಪುರ್ ಚಡ್ಡಿ ಮತ್ತು ಬನಿಯನ್ ಧರಿಸಿದ್ದಾರೆ. ಈ ಕಾಸ್ಟ್ಯೂಮ್ ನೋಡಿದ ಅಭಿಮಾನಿಗಳು ಇದ್ಯಾವ ರೀತಿಯ ದಿರಿಸು ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಅಚ್ಚರಿಯನ್ನೂ ವ್ಯಕ್ತ ಪಡಿಸಿದ್ದಾರೆ.

Loading

Leave a Reply

Your email address will not be published. Required fields are marked *