ಯಶವಂತಪುರ ವಿಧಾನಸಭಾ ಕ್ಷೇತ್ರ:ಹೆರೋಹಳ್ಳಿಯಲ್ಲಿ ಬಿಜೆಪಿ ಪಕ್ಷದ ಮಾಜಿ ಪಾಲಿಕೆ ಸದಸ್ಯರುಗಳಾದ ಹೆರೋಹಳ್ಳಿ ರಾಜಣ್ಣ, ಆರ್ಯ ಶ್ರೀನಿವಾಸ್ ಮತ್ತು ಪ್ರಮುಖ ಮುಖಂಡರುಗಳ ಮುಂದಿನ ರಾಜಕೀಯ ನಡೆ ಕುರಿತು ಮಾಧ್ಯಮಗೋಷ್ಟಿ .ಹೆರೋಹಳ್ಳಿ ರಾಜಣ್ಣರವರು ಮಾತನಾಡಿ ಸ್ವಾಭಿಮಾನ ಧಕ್ಕೆಯಾದ ಕಾರಣದಿಂದ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಪಕ್ಷಕ್ಕೆ ಎಸ್.ಟಿ.ಸೋಮಶೇಖರ್ ಗೌಡ್ರರ ನೇತೃತ್ವದಲ್ಲಿ ಸೇರ್ಪಡೆಯಾದವು. ಬಿಜೆಪಿ ಪಕ್ಷದಲ್ಲಿ ಕಾಂಗ್ರೆಸ್ ಪಕ್ಷದಿಂದ ಬಂದ ಕಾರ್ಯಕರ್ತರನ್ನ ಕಡೆಗಣಿನೆ ಮಾಡಿದರು ಅದು ನೋವು , ಸಹನೆಯಿಂದ ಪಕ್ಷ ನಿಷ್ಠೆಯಿಂದ ಬಿಜೆಪಿ ಗೆಲ್ಲುವು ಪಡೆಯಲು ಸಂಘಟನೆ ಮಾಡಲಾಯಿತು. ಇಂದು ಸಹ ಮೂಲ ಬಿಜೆಪಿ ಮತ್ತು ವಲಸಿಗ ಬಿಜೆಪಿ ಎಂಬ ಭೇದಬಾವವಿದೆ.
ಯಶವಂತಪುರ ವಿಧಾನಸಭಾ ಕ್ಷೇತ್ರದ ಪಕ್ಷ ವಿರೋಧಿ ಕೆಲಸ ಮಾಡುತ್ತಿರುವ ಮಾರೇಗೌಡರ ಮೇಲೆ ಕ್ರಮ ಕೈಗೊಳ್ಳಬೇಕು ಇಲ್ಲದೇ ಹೋದರೆ ಮುಂಬರುವ ದಿನಗಳಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು. ಆರ್ಯ ಶ್ರೀನಿವಾಸ್ ರವರು ಮಾತನಾಡಿ ಬಿಜೆಪಿ ಪಕ್ಷದಲ್ಲಿ ಇದ್ದು ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿರುವ ಮಾರೇಗೌಡರ ವಿರುದ್ದ ಕ್ರಮ ಕೈಗೊಳ್ಳಬೇಕು. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷಕ್ಕೆ ಮತ ನೀಡಬೇಡಿ ಎಂದು ಮಾರೇಗೌಡರು ಪ್ರಯುತ್ನಪಟ್ಟರು. ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಮುಂದಿನ ರಾಜಕೀಯ ನಡೆ ಕುರಿತು ಚಿಂತನೆ ಮಾಡಬೇಕಾಗಿದೆ.
ಪಕ್ಷ ವಿರೋಧಿಗಳಿಂದ ಹಲವಾರು ಬೂತ್ ಗಳಲ್ಲಿ ಬೂತ್ ಹಿನ್ನಡೆಯಾಗಿದೆ. ಮುಂಬರುವ ಜಿಲ್ಲಾ ಪಂಚಾಯತ್, ಬಿಬಿಎಂಪಿ ಚುನಾವಣೆಯಲ್ಲಿ ಇಂತಹ ವ್ಯಕ್ತಿಗಳ ಜೊತೆಯಲ್ಲಿ ಚುನಾವಣೆ ಗೆಲ್ಲಲು ಸಾಧ್ಯವೆ . ಮಾರೇಗೌಡರ ಮೇಲೆ ಶಿಸ್ತ್ರು ಕ್ರಮ ಕೈಗೊಳ್ಳಬೇಕು ಎಂದು ವಿನಂತಿ ಮಾಡಿದರು. ಮಾದ್ಯಮಗೋಷ್ಟಿಯಲ್ಲಿ ಬಿಜೆಪಿ ಮುಖಂಡರುಗಳಾದ ಹೊಸಹಳ್ಳಿ ಸತೀಶ್, ಕೃಷ್ಣಪ್ಪ,ಕೆಂಪೇಗೌಡ, ನಂಜುಡೇಶ್, ರಾಮೋಹಳ್ಳಿ ವೇಣುಗೋಪಾಲ್, ಚಿಕ್ಕೇಗೌಡನಪಾಳ್ಯ ಶಿವಮಾದಯ್ಯ, ಮಹೇಶ್ ,ಶ್ರೀನಾಥ್ , ನೂರಾರು ಬಿಜೆಪಿ ಮುಖಂಡರುಗಳು ಪಾಲ್ಗೊಂಡಿದ್ದರು.