ಬೆಂಗಳೂರು: ನೆನ್ನೆ ಬೆಳ್ಳಗ್ಗೆ ಸಿಲಿಕಾನ್ ಸಿಟಿಯ ಬಾರ್ಡರ್ ಆದ ನೈಸ್ ರಸ್ತೆ ಬಳಿ ಇರೋ ಗೊಲ್ಲರಹಟ್ಟಿಯಲ್ಲಿ ಪಿಸ್ತೋಲ್ ಸೌಂಡ್ ಮಾಡಿತ್ತು. ಈ ಗುಂಡಿನ ಸದ್ದು ಇಡೀ ಬೆಂಗಳೂರನ್ನ ಬೆಚ್ಚಿ ಬೀಳಿಸಿತ್ತು. ಅದರಲ್ಲು ಚಿನ್ನದಂಗಡಿ ಮಾಲಿಕರಿಗೆ ನಡುಕ ಹುಟ್ಟಿಸಿತ್ತು. ಯಾಕಂದ್ರೆ ಬ್ಯಾಡರಹಳ್ಳಿ ಠಾಣ ವ್ಯಾಪ್ತಿಯ ಗೊಲ್ಲರಹಟ್ಟಿ ಪೈಪ್ ಲೈನ್ ರಸ್ತೆಯ ವಿನಾಯಕ ಜ್ಯುವೆಲ್ಲರಿ ಶಾಪ್ ನಲ್ಲಿ ಶೂಟ್ ಮಾಡಿ ಚಿನ್ನ ದಿಒಚಲಾಗಿತ್ತು. ಚಿನ್ನ ದೋಚಿದ ಆರೋಪಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಟ್ರಿಗರ್ ಎಳೆದು ಗನ್ ಪಾಯಿಂಟ್ ಮಾಡಿ ಇರೋ ಬರೋ ಚಿನ್ನವನ್ನೆಲ್ಲ ಬ್ಯಾಗ್ ನಲ್ಲಿ ತುಂಬಿ ಎಸ್ಕೇಪ್ ಆಗಿರೋ ದೃಶಯ ಎಕ್ಸ್ ಕ್ಲೂಸಿವ್
ಇನ್ನೂ ಪ್ರಕರಣ ದಾಖಲಿಸಿಕೊಂಡ ಬ್ಯಾಡರಹಳ್ಳಿ ಪೊಲೀಸ್ರು ಮಿಂಚಿನ ಕಾರ್ಯಾಚರಣೆ ನಡೆಸಿ ಪ್ರಕರಣದ ಓರ್ವ ಆರೋಪಿಯನ್ನ ಬಂಧಿಸಿದ್ದಾರೆ. ಕೃತ್ಯವೆಸಗಿ ಹೈದರಾಬಾದ್ ಗೆ ಪ್ಲೈಟ್ ನಲ್ಲಿ ಎಸ್ಕೇಪ್ ಆಗ್ತಿದ್ದ ಹುಸೈನ್ ಎಂಬ ಆರೋಪಿ ಲಾಕ್ ಆಗಿದ್ದಾನೆ. ಆರೋಪಿ ಬಳಿ ಸ್ವಲ್ಪ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ. ಇನ್ನು ಮೂರು ಜನ ಆರೋಪಿಗಳಾದ ಸಿಕಂದರ್, ಕಳ್ಳ ಶಿವ, ವಿಕಾಸ್ ಎಸ್ಕೇಪ್ ಆಗಿದ್ದು ಪೊಲೀಸ್ರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಇನ್ನೂ ಲೋಕಲ್ ಕಳ್ಳನಾಗಿರೋ ಶಿವಾ @ ಕಳ್ಳ ಶಿವನಿಗೆ ಜೈಲಲ್ಲಿ ಹೈದರಾಬಾದ್ ಮೂಲದ ಹುಸೈನ್ ಮತ್ತು ಸಿಕಂದರ್ ಹಾಗೂ ವಿಕಾಸ್ ಪರಿಚಯ ಆಗಿದೆ. ನಾಲ್ವರು ಒಟ್ಡಿಗೆ ಸೇರಿ ದರೋಡೆ ಪ್ಲಾನ್ ಮಾಡಿ ಗನ್ ಬಳಸಿ ದರೋಡೆ ಮಾಡಿದ್ದಾರೆ. ನಂತರ ಹೈದರಾಬಾದ್ ಗೆ ಎಸ್ಕೇಪ್ ಆಗುವಾಗ ಹುಸ್ಸೇನ್ ಲಾಕ್ ಆದ್ರೆ ಉಳಿದ ಮೂವರು ಎಸ್ಕೇಪ್ ಆಗಿದ್ದಾರೆ.