ಬೆಂಗಳೂರು : ಕರ್ನಾಟಕದ ಜನತೆ ಕೋಮುವಾದವನ್ನು ತಿರಸ್ಕರಿಸಿ ಸಂವಿಧಾನದ ಅನುಗುಣವಾಗಿ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ವಿಧಾನಸಭೆ ಚುನಾವಣೆ ನಡೆದಿದ್ದು ಸಂವಿಧಾನ ಮತ್ತು ಕೋಮುವಾದದ ನಡುವಿನ ಯುದ್ಧ, ಜನ ಕೋಮುವಾದವನ್ನು ತಿರಸ್ಕರಿಸಿ, ಸಂವಿಧಾನಕ್ಕೆ ಗೌರವಿಸಿದ್ದಾರೆ.
ಸಂವಿಧಾನಕ್ಕೆ ಗೆಲುವಾಗಿದೆ.
ಇನ್ನು ಸಚಿವ ಸ್ಥಾನ ನೀಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಯು.ಟಿ. ಖಾದರ್, ಸಚಿವ ಸ್ಥಾನ ನೀಡುಬ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ. ಅರ್ಹತೆಗೆ ಅನುಗುಣವಾಗಿ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.