ವ್ಯಾನ್ ಹಾಗೂ ಲಾರಿ ನಡುವೆ ಅಪಘಾತ: 7 ಜನ ಮಹಿಳೆಯರು ಸಾವು

ಚೆನ್ನೈ: ವ್ಯಾನ್ ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ (Accident) ಏಳು ಜನ ಮಹಿಳೆಯರು (Women) ಮೃತಪಟ್ಟ ಘಟನೆ ತಮಿಳುನಾಡಿನ (Tamil Nadu) ನಟ್ರಂಪಳ್ಳಿ ಬಳಿಯ ಚೆನ್ನೈ-ಬೆಂಗಳೂರು (Chennai-Bengaluru Highway) ಹೆದ್ದಾರಿಯಲ್ಲಿ ನಡೆದಿದೆ. ಮುಂಜಾನೆ 3 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ವ್ಯಾನ್ ಮತ್ತು ಲಾರಿ ಚಾಲಕರು ಸೇರಿದಂತೆ 10 ಜನ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಐವರು ಮಹಿಳೆಯರು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಮೀನಾ (50), ಡಿ.ದೇವಯಾನಿ (32), ಸೈಟ್ಟು (55), ದೇವಿಕಾ (50), ಸಾವಿತ್ರಿ (42), ಕಲಾವತಿ (50) ಮತ್ತು ಆರ್ ಗೀತಾ (34) ಎಂದು ಗುರುತಿಸಲಾಗಿದೆ. ಇವರೆಲ್ಲರೂ ವೆಲ್ಲೂರಿನ ಪೆರ್ನಂಬುಟ್‌ಗೆ ಸೇರಿದವರಾಗಿದ್ದಾರೆ. ಇನ್ನೂ ಅಪಘಾತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯರು ಪ್ರವಾಸಕ್ಕೆ ತೆರಳಿದ್ದರು. ವಾಪಸ್ ಮನೆಗೆ ಮರಳುತ್ತಿದ್ದಾಗ ಹೆದ್ದಾರಿಯಲ್ಲಿ ವ್ಯಾನ್‌ನ ಮುಂಭಾಗದ ಚಕ್ರ ಪಂಕ್ಚರ್ ಆಗಿದೆ. ಈ ವೇಳೆ ಮಹಿಳೆಯರು ರಸ್ತೆ ಬದಿಯ ಸಿಮೆಂಟ್ ಕಟ್ಟೆಯ ಮೇಲೆ ಕುಳಿತಿದ್ದರು. ಇದೇ ಮಾರ್ಗವಾಗಿ ಬಂದ ಲಾರಿಯೊಂದು ವ್ಯಾನ್‌ಗೆ ಡಿಕ್ಕಿಯಾಗಿದೆ ಪರಿಣಾಮ ವ್ಯಾನ್ ಮಹಿಳೆಯರ ಮೇಲೆ ಉರುಳಿದ್ದು ಈ ದುರ್ಘಟನೆ ಸಂಭವಿಸಿದೆ.

Loading

Leave a Reply

Your email address will not be published. Required fields are marked *