ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಅಪಘಾತ: ಸಿಬ್ಬಂದಿ ಕಾಲು ಕಟ್

ಬೆಂಗಳೂರು: ಬೆಂಗಳೂರಿನ ಜಯನಗರ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಅಪಘಾತ ನಡೆದಿದೆ. ಹೌದು ಬಿಎಂಟಿಸಿ ಬಸ್ ಚಕ್ರಕ್ಕೆ ಸಿಲುಕಿ ಕಂಡಕ್ಟರ್‌ವೊಬ್ಬರ ಕಾಲಿನ ಪಾದವೇ ಕಟ್ ಆಗಿರುವ ಘಟನೆ ನಡೆದಿದೆ. ಕಂಡಕ್ಟರ್‌ವೊಬ್ಬರು ಕೆಲಸಕ್ಕೆಂದು ಬಿಎಂಟಿಸಿ ಬಸ್‌ನಲ್ಲಿ ಬರುತ್ತಿದ್ದರು.

ಡ್ಯುಟಿಗೆ ಟೈಮ್ ಆಯಿತೆಂದು ಆತುರದಲ್ಲಿ ಜಯನಗರದ ಬಿಎಂಟಿಸಿ ಬಸ್ ಸ್ಟ್ಯಾಂಡ್ ಸಮೀಪಿಸುತ್ತಿದ್ದಂತೆ ಇಳಿಯಲು ಮುಂದಾದರು. ಬಸ್ ಸ್ಟ್ಯಾಂಡ್ ಸಮೀಪ ರಸ್ತೆ ತಡೆ ಇದ್ದ ಕಾರಣಕ್ಕೆ ಚಾಲಕ ಬಸ್ ನಿಧಾನ ಮಾಡಿದ್ದರು. ಡಿಪೊ ಎಂಟ್ರಿ ಪಡೆಯುತ್ತಿದ್ದಂತೆ ಕೆಲಸದ ಅವಸರದಲ್ಲಿ ಇಳಿಯಲು ಹೋದಾಗ ಕಾಲು ಜಾರಿದೆ.

ಈ ವೇಳೆ ಬಸ್ ಚಕ್ರಕ್ಕೆ ಸಿಲುಕಿದ ಸಿಬ್ಬಂದಿಯ ಕಾಲಿನ ಪಾದವೇ ಕಟ್ ಆಗಿದೆ. ಕಂಡಕ್ಟರ್‌ ಚೀರಾಟವನ್ನು ಗಮನಿಸಿದ ಸ್ಥಳೀಯರು ಕೂಡಲೇ ಆಟೋದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಜಯನಗರದ ಅಪೋಲೊ ಆಸ್ಪತ್ರೆಯಲ್ಲಿ ಗಾಯಾಳುವನ್ನು ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿರುವ ಕಂಡಕ್ಟರ್‌ಗೆ ಚಿಕಿತ್ಸೆ ಮುಂದುವರಿದಿದೆ.

Loading

Leave a Reply

Your email address will not be published. Required fields are marked *