ಬೆಂಗಳೂರು: ಸೈದ್ಧಾಂತಿಕವಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನು ಎದುರಿಸುವ ಶಕ್ತಿ ಇಲ್ಲದಿದ್ದರೆ ನಿಮ್ಮ ಸೋಲನ್ನು ಒಪ್ಪಿಕೊಳ್ಳಿ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು (Ramesh Babu) ಅವರು ಬಿಜೆಪಿಗರಿಗೆ ಸವಾಲು ಹಾಕಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಒಂದು ಸಂಪ್ರದಾಯವಿದೆ.
ಯಾವುದೇ ರಾಜಕಾರಣಿಯನ್ನು ವೈಯಕ್ತಿಕ ದ್ವೇಷದಿಂದ ಟೀಕಿಸುವುದು,
ಕೆಳಮಟ್ಟದ ಟೀಕೆಗಳು ಮತ್ತು ಚಾರಿತ್ರ್ಯ ವಧೆ ಮಾಡುವಂತಹ ಟೀಕೆಗಳನ್ನು ಮಾಡುವುದು ಕಡಿಮೆ. ಆದರೆ ಇತ್ತೀಚಿನ ದಿನಗಳಲ್ಲಿ ಇದಕ್ಕೆ ಕೆಲವು ಬಿಜೆಪಿ ನಾಯಕರುಗಳು ವ್ಯತಿರಿಕ್ತವಾಗಿ ತಮ್ಮ ವರ್ತನೆಯನ್ನು ಬದಲಾಯಿಸಿಕೊಂಡಿದ್ದಾರೆ. ಮನುಷ್ಯತ್ವ ಮರೆತು ಮಾತನಾಡುವರು, ಈ ರೀತಿ ವರ್ತಿಸುವವರನ್ನು ನಮ್ಮ ಆಡು ಭಾಷೆಯಲ್ಲಿ ಅಡ್ನಾಡಿಗಳು ಎಂದು ಕರೆಯುತ್ತೇವೆ. ಇಲ್ಲಾ ಏಳು ತಿಂಗಳಿಗೆ ಹುಟ್ಟಿದವರು ಎಂದು ಕರೆಯುತ್ತೇವೆ ಎಂದರು.