ವಿಮಾನ ನಿಲ್ದಾಣದಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಯುವತಿ

ನ್ನ ಪ್ರಿಯಕರನೊಂದಿಗೆ ಜಗಳವಾಡಿದ ನಂತರ ಯುವತಿಯೊಬ್ಬಳು ಹೈದರಾಬಾದ್ ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ನಡೆದಿದೆ. ವಿಮಾನ ನಿಲ್ದಾಣದ ನಿರ್ಗಮನದ ರಾಂಪ್ ರೇಲಿಂಗ್‌ನಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ತನ್ನ ತಾಯ್ನಾಡು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಯುವತಿ ಮತ್ತು ಆಕೆಯ ಪ್ರಿಯಕರನ ನಡುವೆ ಡಿಪಾರ್ಚರ್ ರಾಂಪ್‌ನಲ್ಲಿ ಕಾಯುತ್ತಿದ್ದಾಗ ಜಗಳ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಜಗಳದ ಸ್ವಲ್ಪ ಸಮಯದ ನಂತರ ಅಸಮಾಧಾನಗೊಂಡ ಯುವತಿ ನಿರ್ಗಮನ ರ್ಯಾಂಪ್ ರೇಲಿಂಗ್‌ನಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದಳು. ಅದನ್ನು ನೋಡಿದ ತಕ್ಷಣ ಅಲ್ಲಿದ್ದವರು ಯುವತಿಯನ್ನು ರಕ್ಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರಿಗೂ ಕೌನ್ಸೆಲಿಂಗ್ ನೀಡಿ ಮಹಿಳೆಯ ಯುವತಿಯ ಮೇರೆಗೆ ಪ್ರತ್ಯೇಕವಾಗಿ ತೆರಳಲು ಅವಕಾಶ ನೀಡಿದ್ದರು.

Loading

Leave a Reply

Your email address will not be published. Required fields are marked *