ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ಯುವಕನೊಬ್ಬನಿಂದ ಯುವತಿಯೊಬ್ಬಳು ಪ್ರೀತಿ ಹೆಸರಿನಲ್ಲಿ ಮೋಸ ಹೋದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೌದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕ ಹುಡುಗಿಯೊಂದಿಗೆ ಪ್ರೀತಿಯ ನಾಟಕವಾಡಿ ಆಕೆಯ ಮೇಲೆ ಅತ್ಯಾಚಾರ ಮಾಡಿದ ಆರೋಪ ಕೇಳಿಬಂದಿತ್ತು. ಈ ಹಿನ್ನಲೆ ನೊಂದ ಯುವತಿ ಕೊಡಿಗೆಹಳ್ಳಿ ಪೊಲೀಸರಿಗೆ ದೂರು ನೀಡಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಆ್ಯಂಡಿ ಜಾರ್ಜ್, ಸಂತೋಷ್, ಶಶಿ ಬಂಧಿತ ಆರೋಪಿಗಳು.
ಘಟನೆ ವಿವರ
ಖಾಸಗಿ ಶಾಲೆಯ ಡ್ಯಾನ್ಸಿಂಗ್ ಟೀಚರ್ ಆಗಿರುವ ಆ್ಯಂಡಿ ಜಾರ್ಜ್ ಎಂಬಾತನಿಗೆ ಎರಡು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಕಾಲೇಜೊಂದರ ವಿದ್ಯಾರ್ಥಿನಿ ಪರಿಚಯವಾಗಿದ್ದಳು. ಆಕೆಯೊಂದಿಗೆ ಪ್ರೀತಿ ಆ್ಯಂಡಿ ಹೆಸರಲ್ಲಿ ಸುತ್ತಾಡಿದ್ದನು. ಈ ವೇಳೆ ಆಕೆಯ ಜೊತೆ ಕೆಲ ಖಾಸಗಿ ಫೋಟೋಗಳನ್ನು ಸೆರೆ ಹಿಡಿದಿದ್ದ. ಬಳಿಕ ಅದೇ ಫೋಟೋ ಬಳಸಿಕೊಂಡು ಆಕೆಗೆ ಬೆದರಿಕೆ ಹಾಕಿದ್ದಾನೆ. ಆತಂಕಗೊಂಡು ಯುವತಿ ಆತನಿಂದ ದೂರಾಗಿದ್ದಳು. ಬಳಿಕ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವುದಾಗಿ ಬೆದರಿಸಿ ಅತ್ಯಾಚಾರ ಮಾಡಿ, ಮೊಬೈಲ್ ವಿಡಿಯೋವನ್ನು ಮಾಡಿಕೊಂಡಿದ್ದನಂತೆ. ಇದೇ ರೀತಿಯಾಗಿ ಹಲವು ಬಾರಿ ಬೆದರಿಸಿ ಯುವತಿಯ ಮೇಲೆ ಅತ್ಯಾಚಾರ ಮಾಡಿದ ಆರೋಪ ಕೇಳಿಬಂದಿದೆ.