ಕೊಪ್ಪಳ: ಕೊಪ್ಪಳ ಜಿಲ್ಲೆ ಗಂಗಾವತಿ ಪಟ್ಟಣದಲ್ಲಿ ಬೆಳ್ಳಂಬೆಳಗ್ಗೆ ನಡೆದ ಗಣೇಶ ಮೂರ್ತಿ ವಿಸರ್ಜನೆ ವೇಳೆ ಡಿಜೆ ಸೌಂಡ್ಗೆ ಡ್ಯಾನ್ಸ್ ಮಾಡ್ತಿದ್ದಾಗ ಹೃದಯಾಘಾತದಿಂದ ಯುವಕ ಮೃತಪಟ್ಟ ಘಟನೆ ನಡೆದಿದೆ. ಸುದೀಪ್ ಸಜ್ಜನ್(30) ಮೃತ ದುರ್ದೈವಿ.
ಪ್ರಶಾಂತನಗರದ ಯುವಕರು ಆಯೋಜಿಸಿದ್ದ ಡಿಜೆ ಮೆರವಣಿಗೆ ಸಾಗುತ್ತಿದ್ದ ವೇಳೆ ಡ್ಯಾನ್ಸ್ ಮಾಡುತ್ತಿದ್ದ ಸುದೀಪ್ ಮೃತ ಪಟ್ಟಿದ್ದಾನೆ. ಘಟನೆಯಿಂದ ಯುವಕರು ಸ್ವಯಂಪ್ರೇರಿತವಾಗಿ ಅರ್ಧಕ್ಕೆ ಡಿಜೆ ನಿಲ್ಲಿಸಿದ್ದಾರೆ. ಸುದೀಪ್ ಸಜ್ಜನ್ ಮೃತದೇಹ ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.