ಸಾಲ ಬಾಧೆ ತಾಳಲಾರದೇ ಆತ್ಮಹತ್ಯೆಗೆ ಶರಣಾದ ಕಾರ್ಮಿಕ ದಂಪತಿ

ಬಳ್ಳಾರಿ: ಬಳ್ಳಾರಿ ನಗರದ ಹೊರವಲಯದಲ್ಲಿ ವಾಸವಾಗಿದ್ದ ಕಾರ್ಮಿಕ ದಂಪತಿ ಸಾಲ ಬಾಧೆ ತಾಳಲಾರದೇ ಆತ್ಮಹತ್ಯೆಗೆ ಶರಣಾಗಿದ್ದು, 16 ತಿಂಗಳ ಮಗು ಅನಾಥವಾಗಿದೆ. ಬಳ್ಳಾರಿ ಸಂಸಾರದ ಬಂಡಿ ಸಾಗಲು ಗಂಡ ಹೆಂಡತಿ ಜೋಡೆತ್ತುಗಳಾಗಿ ಸಮಾನವಾಗಿ ಹೋಗಬೇಕು. ಇಲ್ಲವಾದಲ್ಲಿ ಜೀವನದ ಬಂಡಿ ಯಾವುದಾದರೂ ಅಪಘಾತಕ್ಕೆ ಸಿಲುಕಿ ಅರ್ಧದಲ್ಲಿಯೇ ಜೀವನ ಮೂರಾಬಟ್ಟೆ ಆಗುತ್ತದೆ ಎಂಬುದಕ್ಕೆ ಬಳ್ಳಾರಿಯಲ್ಲಿ ನಡೆದ ಈ ದುರ್ಘಟನೆಯೇ ಸಾಕ್ಷಿಯಾಗಿದೆ. ಗಂಡ ಕುಡಿಯುವ ಚಟಕ್ಕೆ ದಾಸನಾಗಿ ಮೈತುಂಬಾ ಸಾಲ ಮಾಡಿಕೊಂಡಿದ್ದಾನೆ. ಗಂಡ ಪದೇ ಪದೆ ಹಣಕ್ಕಾಗಿ ಪೀಡಿಸುತ್ತಿದ್ದಕ್ಕೆ ಬೇಸತ್ತು ಹೆಂಡತಿ ಆತ್ಮಹತ್ಯೆಗೆ ಶರಣಾಗಿದ್ದು, ಬಳಿಕ ಗಂಡನೂ ಸಾವಿನ ಹಾದಿ ಹಿಡಿದಿದ್ದಾನೆ. ಈ ದಂಪತಿಯ 16 ತಿಂಗಳ ಮಗು ಅನಾಥವಾಗಿದೆ.

ಹೌದು, ಸಾಲದ ಕಾಟಕ್ಕೆ ಪತಿ ಪತ್ನಿ ಇಬ್ಬರು ನೇಣಿಗೆ ಶರಣಾಗಿದ್ದಾರೆ. ಹದಿನಾರು ತಿಂಗಳ ಮಗುಬಿಟ್ಟು ದಂಪತಿಗಳ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗಣಿ ನಾಡು ಬಳ್ಳಾರಿಯಲ್ಲಿ ಹೃದಯ ವಿದ್ರಾವವಕ ಘಟನೆ ನಡೆದಿದೆ. ಬಳ್ಳಾರಿಯ ನಗರದ ಬಂಡಿಹಟ್ಟಿ ಯಲ್ಲಿ ಘಟನೆ ನಡೆದಿದ್ದು, ಈರಣ್ಣ(28) ಪತ್ನಿ ದುರ್ಗಮ್ಮ(25) ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ದಂಪತಿಯಾಗಿದ್ದಾರೆ. ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಹಾಗೆ, ಗಂಡ ಹೆಂಡತಿ ಸಾವಿನ ನಂತರ 16 ತಿಂಗಳ ಕೂಸು ಇದೀಗ ಅನಾಥವಾಗಿದೆ.

ಇನ್ನು ದಂಪತಿ ಸಾವಿಗೆ ಕಾರಣ ಹುಡುಕಿದಾಗ ಕುಡಿತದ ಚಟಕ್ಕೆ ದಾಸನಾಗಿದ್ದ ಈರಣ್ಣ ಮೈತುಂಬಾ ಸಾಲ ಮಾಡಿಕೊಂಡಿದ್ದನು. ಸಾಲ ವಸೂಲಿಗೆ ಹಲವರು ಮನೆ ಬಾಗಿಲಿಗೆ ಬಂದು ಕಿರುಕುಳ ನೀಡುತ್ತಿದ್ದರು. ಜೊತೆಗೆ, ಪತ್ನಿ ಕೆಲಸಕ್ಕೆ ಹೋಗಿ ಮಗು ಮತ್ತು ಗಂಡನನ್ನು ನೋಡಿಕೊಳ್ಳುತ್ತಿದ್ದಳು. ಆದರೆ, ಚಿಕ್ಕ ಮಗುವಿನ ಬಗ್ಗೆಯೂ ಸ್ವಲ್ಪ ಕಾಳಜಿಯಿಲ್ಲದ ತಂದೆ, ಹೆಂಡತಿ ದುಡಿದ ಹಣವನ್ನು ಕಿತ್ತುಕೊಂಡು ಮದ್ಯ ಸೇವನೆ ಮಾಡುತ್ತಿದ್ದನು. ಜೊತೆಗೆ, ಪತ್ನಿಯ ಬಳಿ ಕುಡಿತಕ್ಕಾಗಿ ಹಣಕ್ಕಾಗಿ ಇನ್ನಿಲ್ಲದೆ ಪೀಡಿಸಿ ದೈಹಿಕ ಹಲ್ಲೆಯನ್ನೂ ಮಾಡುತ್ತಿದ್ದನು.ಇದರಿಂದ ಬೇಸತ್ತು ಪತ್ನಿ ನೇಣಿಗೆ ಶರಣಾಗಿದ್ದಾಳೆ. ಬಳಿಕ ಇದನ್ನು ನೋಡಿದ ಈರಣ್ಣ, ಕುಡಿತದ ಕಿರುಕುಳದ ಆರೋಪದಿಂದಲೇ ಪತ್ನಿ ಸಾವಿಗೀಡಾಗಿದ್ದಾಳೆ ಎಂಬ ಆರೋಪ ತನ್ನ ಮೇಲೆ ಬರಬಹುದು ಎಂದು ಹೆದರಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈಗ ಮಗು ಅನಾಥವಾಗಿದೆ. ಈ ಘಟನೆ ಕುರಿತು ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

Loading

Leave a Reply

Your email address will not be published. Required fields are marked *