ಬೆಂಗಳೂರು ;- ಮುಂಗಡ ಹಣ ಪಡೆದು ಸಿನಿಮಾ ಮಾಡುತ್ತಿಲ್ಲ ಎಂದು ಕಿಚ್ಚ ಸುದೀಪ್ ಅವರ ವಿರುದ್ಧ ಗಂಭೀರ ಆರೋಪ ಮಾಡಿರುವ ಕುಮಾರ್ ಹೇಳಿಕೆಗೆ ನಿರ್ಮಾಪಕ ಜಾಕ್ ಮಂಜು ಇಂದು ತಿರುಗೇಟು ನೀಡಲಿದ್ದಾರೆ.
ನಟ ಸುದೀಪ್-ನಿರ್ಮಾಪಕ ಕುಮಾರ್ ವಾರ್ ಗೆ ಇದೀಗ ನಯಾ ಟ್ವಿಸ್ಟ್ ಸಿಕ್ಕಿದ್ದು, ಸುದೀಪ್ ಪರ ನಿರ್ಮಾಪಕ ಜಾಕ್ ಮಂಜು ಬ್ಯಾಟಿಂಗ್ ಮಾಡಿದ್ದಾರೆ.
ಇಂದು ಸುದೀಪ್ ಆಪ್ತ ಜಾಕ್ ಮಂಜು ಅವರು ಜಯನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಕ್ಲಾರಿಟಿ ಕೊಡದಿದ್ದಾರೆ.
ಕುಮಾರ್ ಹೇಳಿಕೆಗಳಿಗೆ ಮಂಜು ತಿರುಗೇಟು ಕೊಡಲು ಸಿದ್ಧತೆ ನಡೆಸಿದ್ದು, ಸುದೀಪ್ ನೋಟಿಸ್ ಕಳಿಸಿರೋ ಬೆನ್ನಲ್ಲೇ ಜಾಕ್ ಮಂಜು ನಡೆ ತೀವ್ರ ಕುತೂಹಲ ಕೆರಳಿಸಿದೆ.
ಸುದೀಪ್ ಡೇಟ್ಸ್ ಗಲಾಟೆಗೆ ಇಂದು ತಿರುವು ಸಿಗುತ್ತಾ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.