Breast Milk: ಎದೆ ಹಾಲು ಕುಡಿದು ಮಲಗಿದ್ದ ಮೂರು ತಿಂಗಳ ಮಗು ಸಾವು..!

ತಿರುವನಂತಪುರಂ: ಅಮ್ಮನ ಎದೆಹಾಲು (Breast Milk) ಕುಡಿದು ಮಲಗಿದ್ದ ಮೂರು ತಿಂಗಳ ಪುಟ್ಟ ಕಂದಮ್ಮ ಮೃತಪಟ್ಟ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ. ಜಯಕೃಷ್ಣನ್ ಹಾಗೂ ಜನಿಮೋಲ್ ದಂಪತಿಯ ಮಗ ಜಿತೇಶ್ ಮೃತ ದುರ್ದೈವಿ ಕಂದಮ್ಮ. ಮಗುವಿಗೆ ಹಾಲುಣಿಸಿ ನಿದ್ದೆ ಮಾಡುತ್ತಿದ್ದಂತೆಯೇ ಇತ್ತ ಜನಿಮೋಲ್ ಕೂಡ ನಿದ್ದೆಗೆ ಜಾರಿದ್ದಾರೆ. ಆದರೆ ಮರುದಿನ ಮಗು ಮುಂಜಾನೆ ಎದ್ದೇಳದನ್ನು ಅರಿತ ದಂಪತಿ ಕೂಡಲೇ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ವೈದ್ಯರ ಬಳಿ ಮಗುವನ್ನು ತೋರಿಸಿದ ದಂಪತಿ ಎಷ್ಟು ಕರೆದರೂ ಮಗು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ. ಬಳಿಕ ಪರೀಕ್ಷೆ ನಡೆಸಿದ ವೈದ್ಯರು ಮಗುವಿನ ಹೃದಯಬಡಿತದಲ್ಲಿ ವ್ಯತ್ಯಾಸವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ.

ಅಂತೆಯೇ ಪೋಷಕರು ಎಸ್‍ಐಟಿ ಆಸ್ಪತ್ರೆಗೆ ಕರೆದುಕೊಮಡು ಹೋಗಿದ್ದಾರೆ. ಅಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ. ಮಗು ಸಾವನ್ನಪ್ಪಿರುವ ಆಘಾತಕಾರಿ ವಿಚಾರವನ್ನು ಕಂದಮ್ಮನ ಪೋಷಕರಿಗೆ ವೈದ್ಯರು ತಿಳಿಸಿದ್ದಾರೆ. ಅಲ್ಲದೆ ಎದೆಹಾಲು ಮಗುವಿನ ಶ್ವಾಸನಾಳದಲ್ಲಿ ಸಿಲುಕಿಕೊಂಡು ಉಸಿರಾಡಲು ಕಷ್ಟವಾಗಿ ಮಗು ಮೃತಪಟ್ಟಿರುವುದಾಗಿ ವಿವರಿಸಿದ್ದಾರೆ.

Loading

Leave a Reply

Your email address will not be published. Required fields are marked *