ಲಕ್ನೋ: ಉತ್ತರ ಪ್ರದೇಶದ ಲಕ್ನೋದ ಮನೆಯೊಂದರಲ್ಲಿ ಕಳ್ಳತನ ಮಾಡಲು ಬಂದಿದ್ದ ವ್ಯಕ್ತಿಯೊಬ್ಬ ಆ ಮನೆಯಲ್ಲಿದ್ದ ದುಬಾರಿ ಮದ್ಯವನ್ನು ಕಂಠ ಪೂರ್ತಿ ಕುಡಿದು ಅದೇ ಬೆಡ್ ರೂಂನಲ್ಲೇ ಮಲಗಿದ್ದಾನೆ.
ಘಟನೆ ನಡೆದಾಗ ಮನೆಯ ಕುಟುಂಬಸ್ಥರು ಮದುವೆಗೆ ತೆರಳಿದ್ದರು.
ಅವರು ಮದುವೆಯಿಂದ ಹಿಂದಿರುಗಿದ ನಂತರ ತಮ್ಮ ಮಲಗುವ ಕೋಣೆಯಲ್ಲಿ ಮಲಗಿದ್ದ ವ್ಯಕ್ತಿಯನ್ನು ಅವರು ಕಂಡು ಗಾಬರಿಗೊಂಡಿದ್ದಾರೆ.
ಮನೆಯ ಮಾಲೀಕ ಶರ್ವಾನಂದ್ ಬಿಹಾರದ ಛಾಪ್ರಾ ನಿವಾಸಿಯಾಗಿದ್ದು, ನಿವೃತ್ತ ಸೇನಾ ಸಿಬ್ಬಂದಿಯಾಗಿದ್ದಾರೆ. ಅವರು ತಮ್ಮ ಕುಟುಂಬದೊಂದಿಗೆ ಲಕ್ನೋದ ಕ್ಯಾಂಟ್ ಪೊಲೀಸ್ ಠಾಣೆ ವ್ಯಾಪ್ತಿಯ ನಿರ್ಮಲಾ ಕಟಾರಿ ಭಾಗದಲ್ಲಿ ವಾಸಿಸುತ್ತಿದ್ದಾರೆ. ಘಟನೆ ನಡೆದ ದಿನ ಶರ್ವಾನಂದ್ ತಮ್ಮ ಸಂಬಂಧಿಕರ ಮನೆಗೆ ಮದುವೆಗೆ ಹೋಗಿದ್ದರು.
ಮದುವೆಯಿಂದ ಹಿಂದಿರುಗಿದಾಗ ಗೇಟ್ನ ಮೇಲ್ಭಾಗವು ಮುರಿದುಹೋಗಿರುವುದು ಕಂಡುಬಂದಿದೆ. ಬೀಗವನ್ನು ತೆರೆದಾಗ ಮನೆಯೊಳಗಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ನಾನು ಬೆಡ್ರೂಮ್ಗೆ ಬಂದ ತಕ್ಷಣ, ಒಬ್ಬ ಯುವಕ ಆರಾಮವಾಗಿ ಮಲಗಿದ್ದನ್ನು ನೋಡಿದೆ ಮತ್ತು ಅಲ್ಲಿ ಮದ್ಯದ ಖಾಲಿ ಬಾಟಲಿಗಳು ಕೂಡ ಬಿದ್ದಿದ್ದವು ಎಂದು ಶರ್ವಾನಂದ್ ಹೇಳಿದ್ದಾರೆ.