ಸ್ನೇಹಿತನನ್ನು ನೋಡಲು ಬಂದ ಸ್ವಿಟ್ಜರ್ಲೆಂಡ್ ಮಹಿಳೆ ಹೆಣವಾದಳು..! ಹೇಗೆ ಗೊತ್ತಾ..?

ನವದೆಹಲಿ: ಸ್ವಿಟ್ಜರ್ಲೆಂಡ್ನ  ಮಹಿಳೆಯೊಬ್ಬಳನ್ನು  ತನ್ನ ದೇಶದಿಂದ ದೆಹಲಿಗೆ  ಕರೆಸಿಕೊಂಡು ಕೈಕಾಲು ಕಟ್ಟಿ ಹತ್ಯೆಗೈದ ಘಟನೆ ನಡೆದಿದೆ. ಹತ್ಯೆಗೊಳಗಾದ ಮಹಿಳೆಯನ್ನು ಲೀನಾ ಬರ್ಗರ್ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುಪ್ರೀತ್ ಸಿಂಗ್ ಎಂಬಾತನನ್ನು ಪೊಲೀಸರು  ಬಂಧಿಸಿದ್ದಾರೆ. ಆರೋಪಿ ಸ್ವಿಟ್ಜರ್ಲೆಂಡ್ಗೆ ತೆರಳಿದ್ದಾಗ ಮಹಿಳೆಯನ್ನು ಭೇಟಿಯಾಗಿದ್ದು, ಬಳಿಕ ಇಬ್ಬರೂ ಸ್ನೇಹಿತರಾಗಿದ್ದರು.
ಮಹಿಳೆಯನ್ನು ಭೇಟಿಯಾಗಲು ಆರೋಪಿ ಆಗಾಗ ಸ್ವಿಟ್ಜರ್ಲೆಂಡ್ಗೆ ತೆರಳುತ್ತಿದ್ದ. ಆಕೆಗೆ ಬೇರೆ ವ್ಯಕ್ತಿಯೊಂದಿಗೆ ಸಂಬಂಧವಿದೆ ಎಂದು ಶಂಕಿಸಿ ಆರೋಪಿ ಆಕೆಯನ್ನು ಹತ್ಯೆ ಮಾಡಿದ್ದಾನೆ. ಮಹಿಳೆಯ ಹತ್ಯೆಗೆ ಸಂಚು ರೂಪಿಸಿ ಭಾರತಕ್ಕೆ ಬರುವಂತೆ ಆಕೆಯನ್ನು ಕರೆಸಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ. ಮಹಿಳೆ ಅ.11 ರಂದು ಭಾರತಕ್ಕೆ ಬಂದಿದ್ದರು. ಐದು ದಿನಗಳ ಬಳಿಕ ಆಕೆಯನ್ನು ತನ್ನ ರೂಮಿಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಅವಳ ಕೈ ಮತ್ತು ಕಾಲುಗಳನ್ನು ಕಟ್ಟಿ ಕೊಲೆ ಮಾಡಿದ್ದಾನೆ. ಸ್ವಲ್ಪ ದಿನ ಮೃತ ದೇಹವನ್ನು ಕಾರಿನಲ್ಲಿ ಇರಿಸಿಕೊಂಡಿದ್ದ.
ದುರ್ವಾಸನೆ ಬಂದ ಬಳಿಕ ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಹಾಕಿ ರಸ್ತೆಯ ಬದಿಯಲ್ಲಿ ಎಸೆದು ಹೋಗಿದ್ದ. ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ವಾಹನದ ನೋಂದಣಿ ಸಂಖ್ಯೆ ಪಡೆದು ನಂತರ ದೆಹಲಿ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಆರೋಪಿಯ ಮನೆಯಲ್ಲಿ 2.25 ಕೋಟಿ ರೂ. ಹಾಗೂ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

Loading

Leave a Reply

Your email address will not be published. Required fields are marked *