ಮೆಡಿಕಲ್ ಸೀಟು ಕೋಡಿಸೋದಾಗಿ ವಿದ್ಯಾರ್ಥಿಗೆ ಲಕ್ಷ ಲಕ್ಷ ದೋಖಾ

ಬೆಂಗಳೂರು: ಮೆಡಿಕಲ್ ಸೀಟ್ ಕೊಡಿಸುವುದಾಗಿ ಹೇಳಿ ವಂಚಿಸಿದ ಪ್ರಕರಣ ಬೆಂಗಳೂರು ನಗರದಲ್ಲಿ ಬಯಲಿಗೆ ಬಂದಿದ್ದು ಪೊಲೀಸರು ಐವರನ್ನು ಅರೆಸ್ಟ್ ಮಾಡಿದ್ದಾರೆ. ನಗರದ ಹೈ ಪೈ ಕಚೇರಿ ಮುಂಭಾಗಕ್ಕೆ ಕರೆಸಿ, ಮೈಸೂರು ಮೂಲದ ಮೆಡಿಕಲ್ ವಿದ್ಯಾರ್ಥಿಗೆ ಲಕ್ಷ ಲಕ್ಷ ದೋಖಾ ಮಾಡಿದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ವಿಜಯನಗರ ವಿದ್ಯಾರ್ಥಿ ಕಲಾ ಮಂಜುನಾಥ್ ಎಂಬುವವರ ಬಳಿ ಲಕ್ಷಾಂತರ ರೂಪಾಯಿ ಪಡೆದು ವಂಚನೆ ಮಾಡಿದ್ದಾರೆನಗರದ ಕನ್ನಿಂಗ್ ಹ್ಯಾಮ್ ರಸ್ತೆಯ ಕಚೇರಿಗೆ ಕರೆಸಿ ನಕಲಿ ಸಂಸ್ಥೆಯಿಂದ ವಂಚನೆ ಮಾಡಲಾಗಿದ್ದು,

ಮೆಡಿಕಲ್ ಸೀಟ್ ಗಾಗಿ ತಯಾರಿ ನಡೆಸಿದ್ದ ವಿದ್ಯಾರ್ಥಿ ಗೆ ನೀಟ್ ಪರೀಕ್ಷೆಯಲ್ಲಿ ರ್ಯಾಂಕ್ ಬಂದಿರಲಿಲ್ಲ ಈ ವೇಳೆ ವಿದ್ಯಾರ್ಥಿ ಅಣ್ಣನ ಮೊಬೈಲ್ ಗೆ ಬಂದಿದ್ದ ಅನಾಮಿಕ ಮೆಸೇಜ್ ಬಂದ ಕೆಲ ಹೊತ್ತಲ್ಲೆ ಬಂದ ಪೋನ್ ಕರೆ ಬಂದಿತ್ತುನಾಲ್ಕೈದು ವರ್ಷಗಳಿಂದ ಮೆಡಿಕಲ್ ಸೀಟ್ ಕೊಡಿಸುತ್ತಿದ್ದೇವೆ..ನಿಮ್ಮ ಮಗನಿಗೆ ದಾವಣಗೆರೆಯಲ್ಲಿ ಸೀಟ್ ಕೊಡಿಸುತ್ತೇವೆ..ಮೆಡಿಕಲ್ ಸೀಟ್ ಗೆ 60 ಲಕ್ಷ ಆಗುತ್ತೆ ಎಂದು ಡೀಲ್ ಮಾತಾಡಿದ್ರು..ಕನ್ನಿಂಗ್ ಹ್ಯಾಮ್ ರಸ್ತೆಯ ಅದೊಂದು ಕಚೇರಿಗೆ ಕರೆಯಿಸಿಕೊಂಡು ಇದು ನಮ್ಮ ಕಚೇರಿ ಅಂತಾ ತೋರಿಸಿದ್ರು..

ರೋಶಿನಿ,ಆಶುತೋಷ್, ನಿಖಿಲ್ ಸೇರಿ ಖಾಸಗಿ ಕಾಲೇಜಿನ ಕಾರ್ಯದರ್ಶಿ ಎಂದು ಯೋಗೇಶ್ ಎಂಬುವವರನ್ನು ಪರಿಚಯ ಮಾಡಿಸಿದ್ರು ನಂತರ ಇವರು ನಮ್ಮ ಬಾಸ್ ಅಂತಾ ಮಾನ ಗುಪ್ಪ ಅನ್ನೋ ವ್ಯಕ್ತಿಯನ್ನು ಪರಿಚಯ ಮಾಡಿಸಿ ಸರ್ಕಾರಿ ಕೋಟಾದಲ್ಲೆ ಸೀಟ್ ಸಿಗುತ್ತೆ ಅಂತಾ ಹೇಳಿದ್ರು..ಹೀಗೆ ಐದು ಜನ ಸೇರಿಕೊಂಡು ಹಂತ ಹಂತವಾಗಿ ಹತ್ತುವರೇ ಲಕ್ಷ ಪಡೆದು ಎಸ್ಕೇಪ್ ಆಗಿದ್ದಾರೆ ಹಾಗೆ ಮೋಸ ಹೋದ ನಂತರ ಕಚೇರಿ ಗೆ ಹೋಗಿ ನೋಡಿದಾಗ ಅದು ನಕಲಿ ಅನ್ನೋದು ಗೊತ್ತಾಗಿದೆ.ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.ಸದ್ಯ ಐದು ಜನರನ್ನು ಬಂಧಿಸಿರುವ ಪೊಲೀಸರು

Loading

Leave a Reply

Your email address will not be published. Required fields are marked *