ಬೆಂಗಳೂರು: ಆತ ಹೈದ್ರಾಬಾದ್ ಮೂಲದ ವ್ಯಕ್ತಿ. ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜನಿಯರ್. ಒಳ್ಳೆ ಸಂಸ್ಥೆಯಲ್ಲಿ ಕೆಲಸ ಕೈತುಂಬಾ ಸಂಬಳ. ಹೆಂಡತಿ ಮಕ್ಕಳೊಂದಿಗೆ ಸುಖವಾದ ಸಂಸಾರ ಮಾಡ್ತಾ ಇದ್ದ. ಆದ್ರೆ ಸಂಸಾರದಲ್ಲಿ ಅದೇನ್ ಆಯ್ತೋ ಏನೋ ಗೊತ್ತಿಲ್ಲ.. ತಮ್ಮ ಮುದ್ದಾದ ಇಬ್ಬರು ಪುಟ್ಟ ಹೆಣ್ಣುಮಕ್ಕಳನ್ನು ಕೊಲೆ ಮಾಡಿ ತಾವು ಆತ್ಮಹತ್ಯೆ ಮಾಡಿಕೊಂಡಿದ್ದಾರೆ..
ಹೌದು.. ಒಂದು ಕಡೆ ಹೀಗೆ ಅಪಾರ್ಟ್ಮೆಂಟ್ ನಿವಾಸಿಗಳೆಲ್ಲ ನಿಂತ್ಕೊಂಡು ಗುಸು ಗುಸು ಮಾತನಾಡುತ್ತಿದ್ದಾರೆ.. ಮತ್ತೊಂದು ಕಡೆ ಎಫ್ ಎಸ್ ಎಲ್ ಟೀಂ ಪರಿಶೀಲನೆ ಹಾಗೂ ಪೊಲೀಸರಿಂದ ಮಾಹಿತಿ ಸಂಗ್ರಹ ಮಾಡುತ್ತಿರುವ ಈ ದೃಶ್ಯಗಳು ಕಂಡು ಬಂದಿದ್ದು ಕಾಡುಗೋಡಿ ಪೋಲಿಸ್ ಠಾಣಾ ವ್ಯಾಪ್ತಿಯ ಸಾಯಿ ಗಾರ್ಡನ್ ಅಪಾರ್ಟ್ಮೆಂಟ್ ನಲ್ಲಿ. ಈ ಫೋಟೋದಲ್ಲಿ ಇರೋ ದಂಪತಿಯ ಹೆಸರು ವಿಜಯ್ ಹಾಗೂ ಹೇಮಾವತಿ. ಕಾಡುಗೋಡಿಯ ಸಾಯಿ ಗಾರ್ಡನ್ ಅಪಾರ್ಟ್ಮೆಂಟ್ ನ ನಿವಾಸಿಗಳು. ಈ ದಂಪತಿ ಮೂರು ದಿನಗಳ ಹಿಂದೆ ತಮ್ಮ 8 ತಿಂಗಳ ಹಾಗೂ 2 ವರ್ಷದ ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವತ್ತು ಮಧ್ಯಾಹ್ನ ಅಕ್ಕಪಕ್ಕದ ನಿವಾಸಿಗಳಿಗೆ ವಾಸನೆ ಬಂದಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮನೆ ಬಾಗಿಲು ಹೊಡೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮೂಲತಃ ಆಂಧ್ರದ ದಂಪತಿ 6 ವರ್ಷಗಳ ಹಿಂದೆ ಮದುವೆಯಾಗಿ ನಗರಕ್ಕೆ ಬಂದು ವಾಸವಾಗಿದ್ರು. ಇತ್ತ ವಿಜಯ್ ಕೂಡ ಪ್ರತಿಷ್ಠಿತ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡ್ತಾ ಇದ್ದು, ಕೈ ತುಂಬಾ ಸಂಬಳ ಬರ್ತಾ ಇತ್ತು. ಇರೋದ್ರಲ್ಲಿ ನೆಮ್ಮದಿ ಜೀವನ ನಡೆಸ್ತಾಯಿದ್ರು. ಆದ್ರೆ ಸಂಸಾರದಲ್ಲಿ ಅದೇನ್ ಆಯ್ತೋ ಏನೋ ಆ ದೇವರಿಗೆ ಗೊತ್ತು ಮಕ್ಕಳನ್ನ ಕೊಲೆ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಬಳಿಕ ಎಫ್ ಎಸ್ ಎಲ್ ಟಿಂ ಕೂಡ ಬಂದಿದ್ದು ಇಡೀ ಮನೆಯನ್ನು ಪರಿಶೀಲನೆ ಮಾಡಿದ್ದಾರೆ. ನಂತ್ರ ಪೊಲೀಸರು ಅಕ್ಕಪಕ್ಕದ ನಿವಾಸಿಗಳನ್ನು ವಿಚಾರಣೆ ಮಾಡಿದ್ದು ನಾಲ್ಕು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನೆ ಮಾಡಿದ್ದು ನಾಳೆ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಇನ್ನು ಆಂಧ್ರದಲ್ಲಿ ಇರೋ ವಿಜಯ್ ಹಾಗೂ ಹೇಮಾವತಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು ಅವರು ಬೆಂಗಳೂರಿಗೆ ಬರ್ತಾ ಇದ್ದಾರೆ. ಕುಟುಂಬಸ್ಥರು ಬಂದು ಏನು ದೂರು ಕೊಡ್ತಾರೆ ಅದರ ಮೇಲೆ ಕಾಡುಗೋಡಿ ಪೊಲೀಸರು ಪ್ರಕರಣ ದಾಖಲಿಸ್ತೀವಿ ಅಂತಿದ್ದಾರೆ. ಒಟ್ಟಾರೆಯಾಗಿ, ಅದು ಏನೇ ಇರಲಿ, ಇನ್ನು ಲೋಕ ಜ್ಞಾನವೇ ಗೊತ್ತಾಗದ ಪುಟ್ಟ ಕಂದಮ್ಮಗಳು ದುರಂತ ಸಾವು ಕಂಡಿದ್ದು ಮಾತ್ರ ದುರಂತವೇ ಸರಿ..