ಬೆಂಗಳೂರು: ನಮ್ದು ಹಳೇ ಗಾಡಿ..ನಮ್ ವಾಹನಕ್ಕೆ 20 ವರ್ಷ ವಯಸ್ಸಾಗಿದೆ..ಹೀಗೆ ವೋಲ್ಡ್ ಗಾಡಿ ಅಂತಾ ಇನ್ನೇಲೆ ಬೀಗೋಕೆ ಹೋಗ್ ಬೇಡಿ.ಯಾಕೆಂದರೆ ವೋಲ್ಡ್ ವಾಹನಗಳಿಗೆ ಶಾಕ್ ಕೊಡಲು ಸರ್ಕಾರ ಸಜ್ಜು ಅಗಿದ್ದು,ರಾಜ್ಯದಲ್ಲಿಗುಜರಿ ನೀತಿ ಕೆಲ ದಿನಗಳಲ್ಲೇ ಜಾರಿಯಾಗಲಿದ್ದು,ಹಳೇ ವಾಹನಗಳ ರಿನಿವಲ್ ಸ್ಪಾಟ್ ಮಾಡೋ ಪ್ಲಾನ್ ಮಾಡಲಾಗ್ತಿದೆ
ಬೆಂಗಳೂರು ಬೆಳೆದಂತೆ ವಾಹನ ಸಂಖ್ಯೆ ಕೂಡ ಹೆಚ್ಚಳವಾಗ್ತಿದೆ.ಸದ್ಯ ನಗರದ ಎಲ್ಲೆಡೆ ಟ್ರಾಫಿಕ್ ಜಾಮ್ ಜಾಮ್.ಟ್ರಾಫಿಕ್ನ್ನ ನಿಯಂತ್ರಣ ಮಾಡೋಕೆ ಸರ್ಕಾರ ಇನ್ನಿಲ್ಲದ ಕಸರತ್ತು ಮಾಡ್ತಿದೆ.ಮತ್ತೊಂದೆಡೆ ಹಳೆ ವಾಹನಗಳು ನಗರದಲ್ಲಿ ಸಿಕ್ಕಾಪಟ್ಟೆ ಮಾಲಿನ್ಯವನ್ನು ಉಂಟು ಮಾಡ್ತಿದೆ..ಹೀಗಾಗಿ ಮುಂದಿನ ದಿನದಲ್ಲಿ ಉಸಿರಾಡುವ ಗಾಳಿ ವಿಷಕಾರಿಯಾಗುವ ಭೀತಿಯಲ್ಲಿ ರಾಜ್ಯ ಸರ್ಕಾರ ಗುಜರಿ ನೀತಿಯನ್ನುಜಾರಿ ಮಾಡಲು ಮುಂದಾಗಿದೆ.
ಹೌದು..ಒಂದು ಕಡೆ ಸರ್ಕಾರ ಮಹಾನಗರಿ ಬೆಂಗಳೂರಿನಲ್ಲಿ ಸಂಚಾರ ದಟ್ಟನೆ ನಿಯಂತ್ರಿಸಲು ಹಾಗೂ ಮಾಲೀನ್ಯ ಪ್ರಯಾಣ ಕಡಿಮೆ ಮಾಡೋದರಲ್ಲಿ ಪದೇ ಪದೇ ವಿಫಲವಾಗ್ತಿದೆ. ಇದೀಗ ಸ್ಕ್ರ್ಯಾಪಿಂಗ್ ಪಾಲಿಸಿ ಮಾಡೋ ಮೂಲಕ ಖಾಸಗಿ ಬಳಕೆ ವಾಹನಗಳಿಗೆ 20 ವರ್ಷ, ವಾಣಿಜ್ಯ ವಾಹನಗಳಿಗೆ 15 ವರ್ಷ ಮಿತಿ ಏರಲು ತೀರ್ಮಾನಿಸಿದೆ.ಈ ಸಂಬಂಧ ಸರ್ಕಾರ ಗುಜರಿಗೆ ನೀತಿ ಚರ್ಚೆ ಮಾಡುತ್ತಿದ್ದು, ಶೀಘ್ರದಲ್ಲೇ ಅನುಷ್ಠಾನಕ್ಕೆ ಪ್ಲಾನ್ ರೂಪಿಸಲಾಗ್ತದೆ.