ಸೊಮಾಲಿಯಾದ ಕರಾವಳಿ ಬಳಿ 15 ಮಂದಿ ಭಾರತೀಯರಿದ್ದ ಹಡಗು ಅಪಹರಣ

ನವದೆಹಲಿ: ಸೊಮಾಲಿಯಾ ಬಳಿ 15 ಮಂದಿ ಭಾರತೀಯರಿದ್ದ ಸರಕು ಹಡಗನ್ನು ಅಪಹರಣ ಮಾಡಲಾಗಿದೆ. ‘MV LILA NORFOLK’ ಎಂಬ ಸರಕು ಸಾಗಣೆ ಹಡಗನ್ನು ಅಪಹರಿಸಲಾಗಿದ್ದು, ಭಾರತೀಯ ನೌಕಾಪಡೆಯು ಅದರತ್ತ ಯುದ್ಧನೌಕೆಯನ್ನು ಕಳುಹಿಸಿ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಅಪಹರಿಸಿದ ಹಡಗಿನಲ್ಲಿ 15 ಭಾರತೀಯರಿದ್ದಾರೆ. ಸಿಬ್ಬಂದಿಯೊಂದಿಗೆ ಸಂವಹನವನ್ನು ಸ್ಥಾಪಿಸಲಾಗಿದೆ.
ಸೇನಾ ಅಧಿಕಾರಿಗಳ ಪ್ರಕಾರ, ಸೊಮಾಲಿಯಾ ಕರಾವಳಿಯಲ್ಲಿ ಹಡಗನ್ನು ಅಪಹರಿಸಿರುವ ಬಗ್ಗೆ ಗುರುವಾರ ಸಂಜೆ ಮಾಹಿತಿ ಲಭಿಸಿದೆ. ಅಲ್ಲದೇ ಭಾರತೀಯ ನೌಕಾಪಡೆಯ ವಿಮಾನವು ಹಡಗಿನ ಮೇಲೆ ನಿಗಾ ಇರಿಸಿದೆ. ಭಾರತೀಯ ನೌಕಾಪಡೆಯ ಯುದ್ಧನೌಕೆ INS ಚೆನ್ನೈ ಪರಿಸ್ಥಿತಿಯನ್ನು ನಿಭಾಯಿಸಲು ಅಪಹರಣಕ್ಕೊಳಗಾದ ಹಡಗಿನ ಕಡೆಗೆ ಚಲಿಸುತ್ತಿದೆ

Loading

Leave a Reply

Your email address will not be published. Required fields are marked *