ಬೆಂಗಳೂರಲ್ಲಿ ಡ್ರಗ್ಸ್ ಸಪ್ಲೈ ಮಾಡ್ತಿದ್ದ ನೈಜೀರಿಯನ್ ಪ್ರಜೆ ಅರೆಸ್ಟ್!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ಐವರು ಶಂಕಿತ ಉಗ್ರರು ಅರೆಸ್ಟ್ ಆಗಿದ್ದ ಹಿನ್ನೆಲೆ ಎಲ್ಲಾ ಬಾಡಿಗೆ ದಾರರು ಎಚ್ಚೇತ್ತುಕೊಂಡಿದ್ದು ಆದರೂ ಬೆಂಗಳೂರಲ್ಲಿ ಬಾಡಿಗೆ ಮನೆ ತೆಗೆದುಕೊಂಡು ಏನೆಲ್ಲಾ ಕರ್ಮಕಾಂಡಗಳನ್ನು ಮಾಡುತ್ತಾರೆ ಅನ್ನೋದಕ್ಕೆ ನೋಡಿ ಇದೇ ಸಾಕ್ಷಿ.
ಆರ್.ಟಿ ನಗರ ಠಾಣಾ ವ್ಯಾಪ್ತಿಯ ನಗರದಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡೇ ಅಕ್ರಮವಾಗಿ ಡ್ರಗ್ಸ್ ಸಪ್ಲೈ ಮಾಡ್ತಿದ್ದ ನೈಜೀರಿಯನ್ (Nigerian) ಪ್ರಜೆಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಡ್ರಗ್ಸ್ (Drugs) ಸಪ್ಲೈ ಮಾಡುತ್ತಾ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಈತ ಕೊನೆಗೂ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ.
ಮೋಸ್ಟ್ ವಾಂಟೆಡ್ ನೈಜೀರಿಯನ್ ಪ್ರಜೆ ಜಾನ್ ಬಂಧಿತ ಆರೋಪಿ. ಮನೆಯಲ್ಲಿದ್ದ ಸಿಲಿಂಡರ್ ತಳದಲ್ಲೇ ಡ್ರಗ್ಸ್ ಸ್ಟೋರೇಜ್ ಮಾಡಿದ್ದ ಕಿಲಾಡಿ, ಕಚ್ಚಾ ವಸ್ತುವಿನಿಂದ ಕ್ಲಾಸಿ ಡ್ರಗ್ಸ್ ತಯಾರಿಸಿ ಮಾರಾಟ ಮಾಡುತ್ತಿದ್ದ. ಕೊನೆಗೂ ಚಾಲಾಕಿಯನ್ನ ಬಂಧಿಸುವಲ್ಲಿ ವಿವಿ ಪುರಂ ಪೊಲೀಸರು ಯಶಸ್ವಿಯಾಗಿದ್ದಾರೆ. ಭರ್ಜರಿ ಬೇಟೆಯಾಡಿರುವ ಪೊಲೀಸರು 2 ಕೋಟಿ ಮೌಲ್ಯದ 1 ಕೆಜಿ ಎಂಡಿಎಂಎ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ಬಾಡಿಗೆಮನೆಯಲ್ಲಿದ್ದ ಜಾನ್ ಖುದ್ದು ತಾನೇ ಡ್ರಗ್ಸ್ ತಯಾರಿಸುತ್ತಿದ್ದ. ಶುದ್ಧ ಕಚ್ಛಾವಸ್ತುಗಳನ್ನ ಬಳಸಿ ಎಂಡಿಎಂಎ ಪೌಡರ್ ತಯಾರಿಸಿ ಮಾರಾಟ ಮಾಡ್ತಿದ್ದ. ಅದನ್ನ ಮನೆಯಲ್ಲೇ ಸಿಲಿಂಡರ್ ಕೆಳಗೆ ಸ್ಟೋರೆಜ್ ಮಾಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ವಿವಿ ಪುರಂ ಪೊಲೀಸರು (VV Puram Police) ಏಕಾಏಕಿ ದಾಳಿ ನಡೆಸಿದ್ದಾರೆ.

Loading

Leave a Reply

Your email address will not be published. Required fields are marked *