ಕ್ರಿಶ್ಚಿಯನ್ ಹೆಸರಿನಲ್ಲಿ ಹಿಂದೂ ಯುವತಿಗೆ ಮೋಸ ಮಾಡಿದ ಮುಸ್ಲಿಂ ಯುವಕ

ಆನೇಕಲ್: ರಾಜ್ಯ ರಾಜಧಾನಿಗೂ ಲವ್ ಜಿಹಾದ್ ಗಾಳಿ ಬೀಸಿದೆ. ಅನ್ಯ ಕೋಮಿನ ಯುವಕ ತನ್ನ ಧರ್ಮವನ್ನೇ ಮುಚ್ಚಿಟ್ಟು ಸುಳ್ಳು ಹೇಳಿ ಯುವತಿಯನ್ನ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ. ಕೊನೆಗೆ ವಂಚಕನ ಬಣ್ಣ ಬಯಲಾಗಿದ್ದು, ಅಪಾಯಕ್ಕೆ ಸಿಲುಕುವ ಮುನ್ನವೆ ಯುವತಿ ಲವ್ ಜಿಹಾದ್ ಕೂಪದಿಂದ ಪಾರಾಗಿದ್ದಾಳೆ.
ಹೌದು. ತಾನು ಕ್ರಿಶ್ಚಿಯನ್ ಎಂದು ಹೇಳಿಕೊಂಡು ಹಿಂದೂ ಯುವತಿಯನ್ನ ಬಲೆಗೆ ಬಿಳಿಸಿದ್ದ ಯುವಕ ಮುಸ್ಲಿಂ ಎಂಬ ವಿಚಾರ ತಿಳಿಯುತ್ತಿದ್ದಂತೆ ಲವ್ ಜಿಹಾದ್ ಎಂದು ಶಂಕಿಸಿ ಯುವತಿ ಎಚ್ಚೆತ್ತುಕೊಂಡು ಬಚಾವ್ ಆಗಿದ್ದಾಳೆ. ಆದರೆ ಆತನ ಕಿರುಕುಳ ತಾಳಲಾರದೇ ರಕ್ಷಣೆ ಮತ್ತು ನ್ಯಾಯಕ್ಕಾಗಿ ಆನೇಕಲ್ ಉಪವಿಭಾಗದ ಹೆಬ್ಬಗೋಡಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.
ಮಹಾರಾಷ್ಟ್ರ ಮೂಲದ ಹಿಂದೂ ಯುವತಿ ವಂಚನೆಗೊಳಗಾಗಿದ್ದು, ಅಸ್ಸಾಂ ಮೂಲದ ಅಲ್ ಮೆಹಪ್ಯೂಸ್ ಬರಪೂಯಾ ಎಂಬಾತ ಯುವತಿಯನ್ನ ವಂಚಿಸಿದ್ದಾನೆ. ಗಾರ್ಮೆಂಟ್ ರಿಟೇಲ್ನಲ್ಲಿ ಕೆಲಸ ಮಾಡುತ್ತಿದ್ದ ಯುವಕ-ಯುವತಿ ನಗರದಲ್ಲಿ ವಾಸವಾಗಿದ್ದರು. ಒಂದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರಿಂದ ಪ್ರಾರಂಭದಲ್ಲಿ ತಾನು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವನು ನನ್ನ ಹೆಸರು ಮೆಲ್ಬಿನ್ ಹೇಳಿ ಪರಿಚಯ ಮಾಡಿಕೊಂಡು, ಯುವತಿಯನ್ನ ಬಲೆಗೆ ಬೀಳಿಸಿದ್ದಾನೆ.
ಅವನ ಮಾತು ನಂಬಿದ ಯುವತಿ ಎರಡು ವರ್ಷದಿಂದ ಪರಸ್ಪರ ಪ್ರೀತಿ, ಒಡನಾಟದಲ್ಲಿದ್ದಾಳೆ. ಹೀಗಿರುವಾಗ ಒಂದು ದಿನ ಆಕಸ್ಮಿಕವಾಗಿ ಯುವಕನ ಪರ್ಸ್ ನೋಡಿದಾಗ ಆಧಾರ್ಕಾರ್ಡ್ ಸಿಕ್ಕಿದ್ದು, ಅನ್ಯ ಕೋಮಿನವನು ಎಂಬು ಗೊತ್ತಾಗಿದೆ. ನಂತರ ಯುವಕ ಮುಸ್ಲಿಂ ಎಂದು ತಿಳಿದರೆ ಯುವತಿಯರು ಸ್ನೇಹ ಬೆಳೆಸುವುದಿಲ್ಲ ಅದಕ್ಕಾಗಿ ಕ್ರಿಶ್ಚಿಯನ್ ಎಂದು ಸುಳ್ಳು ಹೇಳಿರೋದಾಗಿ ಬಾಯ್ಬಿಟ್ಟಿದ್ದಾನೆ.
ಅನ್ಯ ಕೋಮಿನವನು ಎಂದು ತಿಳಿದ ಬಳಿಕ ಮದುವೆ ಸಾಧ್ಯವಿಲ್ಲ ಎಂದು ಯುವತಿ ಆತನ ಪ್ರೀತಿಯನ್ನ ತಿರಸ್ಕಾರ ಮಾಡಿದ್ದಾಳೆ. ಇದರಿಂದ ಆಕ್ರೋಶಗೊಂಡ ಯುವಕ ಆಕೆಗೆ ಕಿರುಕುಳ ನೀಡಲು ಶುರು ಮಾಡಿದ್ದಾನೆ. ರಾತ್ರಿ ವೇಳೆ ಮನೆ ಬಳಿ ಬಂದು ಗಲಾಟೆ ಮಾಡಿ ಯುವತಿ ಮತ್ತು ಕುಟುಂಬದವರನ್ನ ಮುಗಿಸುವ ಬೆದರಿಕೆ ಹಾಕಿದ್ದಾನೆ. ಪ್ರೀತಿಯ ಹೆಸರಿನಲ್ಲಿ ಯುವತಿ ವಂಚನೆ ಮತ್ತು ಅನ್ಯಾಯಕ್ಕೊಳಗಾಗಿದ್ದು, ಪ್ರಾಣ ರಕ್ಷಣೆ ಮತ್ತು ನ್ಯಾಯಕ್ಕಾಗಿ ಹೆಬ್ಬಗೋಡಿ ಠಾಣೆಯಲ್ಲಿ ನಯವಂಚಕ ಅಲ್ ಮೆಹಪ್ಯೂಸ್ ಬರಪೂಯಾನ ವಿರುದ್ಧ ದೂರು ದಾಖಲಿಸಿದ್ದಾಳೆ.

Loading

Leave a Reply

Your email address will not be published. Required fields are marked *