ಬೆಂಗಳೂರು ;- ನಗರದಲ್ಲಿ ತಡರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಬೃಹದಾಕಾರದ ಮರ ನೆಲಕ್ಕುರುಳಿದೆ. ಸಂಪಂಗಿರಾಮನಗರದ ಬಿಶಪ್ ಕಾಟನ್ ಸ್ಕೂಲ್ ಹಿಂಭಾಗದ ರಸ್ತೆಯಲ್ಲಿ ಘಟನೆ ಜರುಗಿದೆ.
ಸಾಧಾರಣ ಮಳೆ ಇದ್ದು ವಿಪರೀತ ಗಾಳಿ ಇದ್ದ ಕಾರಣ ಮರ ನೆಲಕಚ್ಚಿದೆ. ಕಾರ್ಪೋರೇಷನ್ ಹಾಗೂ ಲಾಲ್ ಬಾಗ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಮರ ಬಿದ್ದಿರುವ ಕಾರಣ ಇಡೀ ರಸ್ತೆ ಸಂಪೂರ್ಣ ಬಂದ್ ಮಾಡಲಾಗಿದೆ.
ಶಾಲಾ ವಾಹನಗಳು, ಇತರೆ ವಾಹನ ಸವಾರರಿಗೆ ಮರ ಬಿದ್ದಿದ್ದರಿಂದ ಕಿರಿಕಿರಿ ಉಂಟಾಗಿದೆ.
ಇನ್ನೂ ನಿನ್ನೆ ತಡರಾತ್ರಿ ಆಗಿರುವ ಘಟನೆ ಇದಾಗಿದ್ದು, ಹೀಗಿದ್ದು, ಬಿದ್ದ ಮರ ತೆರವಿಗೆ ಬಿಬಿಎಂಪಿ ಮುಂದಾಗಿಲ್ಲ. ನಡು ರಸ್ತೆಯಲ್ಲೇ ಅಂಗಾತ ಮರ ಬಿದ್ದಿದ್ದು, ಸಧ್ಯ ಈ ರಸ್ತೆ ಬಂದ್ ಮಾಡಲಾಗಿದೆ.