ಹಾವೇರಿ : ಮಹಿಳೆ ಮೇಲೆ ದಾಳಿ ನಡೆಸಿದ ಚಿರತೆಯೊಂದು ನಂತರ ಪ್ರಾಣಬಿಟ್ಟ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ತುಮ್ಮಿನಕಟ್ಟೆ ಗ್ರಾಮದಲ್ಲಿ ನಡೆದಿದೆ.
ಬಾಯಿ ಹುಣ್ಣಿನಿಂದ ಬಳಲುತ್ತಿದ್ದ ಚಿರತೆ ಆಹಾರವಿಲ್ಲದೇ ಸುಸ್ತಾಗಿ ಮೃತಪಟ್ಟಿದೆ ಎನ್ನಲಾಗಿದೆ. ಇದಕ್ಕೂ ಮುನ್ನ ಗ್ರಾಮದ ಸಿದ್ದಮ್ಮ ಬಣಗಾರ ಎಂಬುವವರು ತೋಟಕ್ಕೆ ಹೋಗುತ್ತಿದ್ದಾಗ ಚಿರತೆ ದಾಳಿ ನಡೆಸಿ ಗಾಯಗೊಳಿಸಿತ್ತು. ಭಯದಿಂದ ಮಹಿಳೆ ಕೂಗಿಕೊಂಡಿದ್ದು, ಸ್ಥಳಕ್ಕೆ ಬಂದ ಜನರು ಚಿರತೆಯನ್ನು ಓಡಿಸಿದ್ದಾರೆ. ನಂತರ ಅಡಕೆ ತೋಟವೊಂದರಲ್ಲಿ ಚಿರತೆ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಬಾಯಿ ಹುಣ್ಣಿನಿಂದ ಬಳಲುತ್ತಿದ್ದ ಚಿರತೆ ಆಹಾರವಿಲ್ಲದೇ ಸುಸ್ತಾಗಿ ಮೃತಪಟ್ಟಿದೆ ಎನ್ನಲಾಗಿದೆ.