ಉತ್ತರ ಕನ್ನಡ: ಗೋಕರ್ಣ ಪ್ರವಾಸಕ್ಕೆ ಆಗಮಿಸಿದ್ದ ಜಪಾನ್ ಮೂಲದ ಮಹಿಳೆ ನಾಪತ್ತೆಯಾಗಿದ್ದಾರೆ. ಎಮಿ ಯಮಾಝಕಿ(40) ಕಾಣೆಯಾದ ಮಹಿಳೆ. ಫೆ.5ರಂದು ಗೋಕರ್ಣದ ಬಂಗ್ಲೆಗುಡ್ಡದ ನೇಚರ್ ಕ್ಯಾಂಪಸ್ನಲ್ಲಿ ತನ್ನ ಪತಿಯ ಜೊತೆ ಮಹಿಳೆ ತಂಗಿದ್ದರು. ಮುಂಜಾನೆ 10.30 ರ ಸಮಯಕ್ಕೆ ನೇಚರ್ ಕ್ಯಾಂಪಸ್ ನಿಂದ ಹೊರ ಹೋಗಿದ್ದ ಮಹಿಳೆ ನಾಪತ್ತೆಯಾಗಿದ್ದಾರೆ. ಈ ಕುರಿತು ಮಹಿಳೆಯ ಪತಿ ದೈ ಯಮಾಝಕಿ ಎಂಬುವವರು ಕೂಡಲೇ ಪತ್ನಿಯನ್ನು ಹುಡುಕಿಕೊಡುವಂತೆ ಗೋಕರ್ಣ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.