ಬೆಂಗಳೂರು: ಪರ ಪುರುಷನೊಂದಿಗಿರುವ ಪತ್ನಿಗೆ ಪತಿ ಜೀವನಾಂಶ ನೀಡಬೇಕಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ಕೊಟ್ಟಿದೆ. ಚಿಕ್ಕಮಗಳೂರಿನ ಮಹಿಳೆ ಪತಿಯಿಂದ ಜೀವನಾಂಶ ಕೋರಿದ್ದರು. ಇದೀಗ ಹೈಕೋರ್ಟ್ ಜೀವನಾಂಶ ಕೋರಿದ್ದ ಪತ್ನಿಯ ಅರ್ಜಿ ವಜಾಗೊಳಿಸಿದೆ. ಮೊದಲು 1500 ರೂ. ಜೀವನಾಂಶ ನೀಡುವಂತೆ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶಿಸಿತ್ತು. ಆದರೆ, ಪತ್ನಿ ನೆರೆಮೆನೆಯವನೊಂದಿಗೆ ಪರಾರಿಯಾಗಿದ್ದಳೆಂದು ಪತಿ ವಾದ ಮಾಡಿದ್ದರು.
ಪೊಲೀಸರಿಗೆ ದೂರು ನೀಡಿದ್ದರೂ ಪತಿಯೊಂದಿಗೆ ಬರಲೊಪ್ಪದ ಪತ್ನಿ, ನೆರೆಮನೆಯವನೊಂದಿಗೆ ಪತ್ನಿ ವಾಸದ ಸಾಕ್ಷ್ಯ ನೀಡಿ, ಪತಿ ವಿಚ್ಚೇದನ ಪಡೆದಿದ್ದನು. ಬಳಿಕ ಪತ್ನಿ ಜೀವನಾಂಶ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಳು. ಇದೀಗ ಪತ್ನಿ ಪರಪುರುಷನೊಂದಿಗೆ ಅನೈತಿಕ ಜೀವನ ನಡೆಸುತ್ತಿದ್ದಾಳೆ. ಇದಕ್ಕೆ ಪೂರಕವಾದ ಸಾಕ್ಷ್ಯವನ್ನು ಪತಿ ಕೋರ್ಟ್ಗೆ ನೀಡಿದ್ದಾನೆ. ಹೀಗಾಗಿ ಆಕೆಗೆ ಪತಿ ಜೀವನಾಂಶ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ನೀಡಿದೆ.