ದೀಪಾವಳಿ ಹಬ್ಬದಂದೇ ಫರ್ನೀಚರ್ ಶೋ ರೂಂಗೆ ಬೆಂಕಿ, ತಪ್ಪಿದ ಅನಾಹುತ

ಬೆಂಗಳೂರು:- ನಗರದಲ್ಲಿ ಫರ್ನೀಚರ್ ಶೋ ರೂಂಗೆ ಬೆಂಕಿ ಬಿದ್ದ ಘಟನೆ ಬೆಂಗಳೂರಿನಲ್ಲಿ ಜರುಗಿದೆ. ಬೆಂಗಳೂರು ಹೊರಮಾವು ಔಟರ್ ರಿಂಗ್ ರೋಡ್ ನಲ್ಲಿನ ಸ್ಟಾನ್ಲಿ ಫರ್ನೀಚರ್ ಶೋರೂಂ ನಲ್ಲಿ ಅವಘಡ ಸಂಭವಿಸಿದೆ. ಐದು ಅಂತಸ್ತಿನ‌ ಬಿಲ್ಡಿಂಗ್ ನಲ್ಲಿ ಮೂರು ಕಂಪನಿಗಳಿದ್ದವು. ಈ ಪೈಕಿ ಫರ್ನೀಚರ್ ಶೋರೂಂ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ನೆಲಮಹಡಿ ಹಾಗೂ ಮೊದಲನೇ ಮಹಡಿಯಲ್ಲಿ ಫರ್ನೀಚರ್ ಶೋರೂಂ ಇದ್ದು, ರಾತ್ರಿ 12 ಗಂಟೆ ಸುಮಾರಿಗೆ ಘಟನೆ ಜರುಗಿದೆ.

ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮೂವರು ಸೆಕ್ಯೂರಿಟಿ ಗಾರ್ಡ್ ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಟ್ಟಡದಲ್ಲಿ ಸಿಲುಕಿದ್ದ ಸೆಕ್ಯೂರಿಟಿ ಗಾರ್ಡ್ ಗಳನ್ನ ಅಗ್ನಿಶಾಮಕದಳ ಸಿಬ್ಬಂಧಿ ರಕ್ಷಣೆ ಮಾಡಿದ್ದಾರೆ. ಘಟನೆಯಲ್ಲಿ ಫರ್ನಿಚರ್ ಶೋರೂಂ ಸಂಪೂರ್ಣ ಭಸ್ಮವಾಗಿದೆ. ಉಳಿದಂತೆ ಕೋಚಿಂಗ್ ಸೆಂಟರ್ ಹಾಗೂ ಐಟಿ ಕಂಪನಿ ಸಣ್ಣಪುಟ್ಟ ವಸ್ತುಗಳು ಬೆಂಕಿಗೆ ಆಹುತಿ ಆಗಿದೆ.

ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಢ ನಡೆದಿರುವ ಶಂಕೆ ವ್ಯಕ್ತವಾಗಿದೆ. ಎರಡನೇ ಮಹಡಿಯಲ್ಲಿ ಕಾಮೆಡ್ ಕೋಂಚಿಂಗ್ ಸೆಂಟರ್ ಇದ್ದು, 3,4 ನೇ ಮಹಡಿಯಲ್ಲಿ ಬ್ರೇಕ್ಸ್ ಕಂಟ್ರೋಲ್ಸ್, ಎಂಬ ಸಾಫ್ಟ್‌ವೇರ್ ಕಂಪನಿ ಇತ್ತು. ಸ್ಥಳಕ್ಕೆ ಬಂದ ನಾಲ್ಕು ಅಗ್ನಿಶಾಮಕದಳ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಸದ್ಯ ಸಂಪೂರ್ಣವಾಗಿ ಅಗ್ನಿಶಾಮಕದಳ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ರಾಮಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Loading

Leave a Reply

Your email address will not be published. Required fields are marked *