ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದು ಕಣ್ಣೀರಿಟ್ಟ ಮಹಿಳಾ ಅಧಿಕಾರಿ..!

ಹೈದರಾಬಾದ್: ಲಂಚ ಸ್ವೀಕರಿಸುವ ವೇಳೆ ತೆಲಂಗಾಣದ ಬುಡಕಟ್ಟು ಕಲ್ಯಾಣ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು ಎಸಿಬಿಗೆ  ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಮಹಿಳೆ ಎಸಿಬಿಗೆ ಸಿಕ್ಕಿಬಿದ್ದ ಬಳಿಕ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬುಡಕಟ್ಟು ಕಲ್ಯಾಣ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಜಗಜ್ಯೋತಿ 84,000 ರೂ. ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ. ವ್ಯಕ್ತಿಯೊಬ್ಬರು ಲಂಚ ಅಧಿಕಾರಿ ಕೇಳುತ್ತಿದ್ದಾರೆ ಎಂದು ಎಸಿಬಿಗೆ ದೂರು ನೀಡಿದ್ದರು. ಇದರಿಂದ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿದ್ದ ವೇಳೆಯೇ ಬಂಧಿಸಿದ್ದಾರೆ.

ಜಗಜ್ಯೋತಿ ಅವರನ್ನು ಫಿನಾಲ್ಫ್ಥಲೀನ್ ಪರೀಕ್ಷೆಗೆ ಎಸಿಬಿ ಅಧಿಕಾರಿಗಳು ಒಳಪಡಿಸಿದಾಗ ಅವರು ಲಂಚ ಪಡೆದಿರುವುದು ಸಾಬೀತಾಗಿದೆ. ಅವರು ಕರ್ತವ್ಯ ನಿರ್ವಹಣೆಯಲ್ಲಿ ಅನುಚಿತವಾಗಿ ಮತ್ತು ಅಪ್ರಾಮಾಣಿಕವಾಗಿ ವರ್ತಿಸಿದ್ದಾರೆ ಎಂದು ಎಸಿಬಿ ಅಧಿಕಾರಿಗಳು ಆರೋಪಿಸಿದ್ದಾರೆ. ಅಧಿಕಾರಿಯ ಬಳಿ ಇದ್ದ 84,000 ರೂ. ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಅವರನ್ನು ಹೈದರಾಬಾದ್‍ನ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಎಸಿಬಿ ಸಿದ್ಧತೆ ನಡೆಸಿದೆ.

Loading

Leave a Reply

Your email address will not be published. Required fields are marked *