ಬೆಂಗಳೂರು:- ಹೆಂಡತಿ ಜೊತೆ ಜಗಳ ಮಾಡಿಕೊಂಡ ಇಲ್ಲೊಬ್ಬ ಭೂಪನೊಬ್ಬ ತನ್ನ ಮಗನನ್ನೇ ಕಿಡ್ನಾಪ್ ಮಾಡಿಸಿರುವ ಘಟನೆ ಜರುಗಿದೆ.
ಗಂಡ ಹೆಂಡತಿಯ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆ ಮಾತಿನಂತೆ ರಾಜಧಾನಿ ಬೆಂಗಳೂರಿನಲ್ಲಿ ಇಂತಹ ಘಟನೆ ಜರುಗಿದೆ.
ಜೂನ್ 16ರ ಶುಕ್ರವಾರ ಬೆಳ್ಳಂಬೆಳಿಗ್ಗೆ ನಡೆದ ಆ ಒಂದು ಘಟನೆ ಪೊಲೀಸರಿಗೆ ಕೆಲ ಘಂಟೆಗಳ ಕಾಲ ತಲೆನೋವು ತರಿಸಿತ್ತು. ಗಂಡ ಹೆಂಡತಿಯ ನಡುವಿನ ಆ ಒಂದು ಜಗಳ ಮಗನನ್ನು ಸಿನಿಮೀಯ ಸ್ಟೈಲ್ನಲ್ಲಿ ಕಿಡ್ನಾಪ್ ಮಾಡಿಸಿದ್ದು ಈ ಘಟನೆ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಸಿತ್ತು. ತನ್ನ ಮಗುವನ್ನು ತಂದೆಯೇ ತಾಯಿಯಿಂದ ಕರೆದೊಯ್ದಿದ್ದು, ಇದು ಕಿಡ್ನಾಪ್ ಅಂತ ತಾಯಿ ಆರೋಪಿಸಿದ್ದಾರೆ. ಅಸಲಿಗೆ ನೈಟ್ ಡ್ಯೂಟಿ ಮುಗಿಸಿದ್ದ ವಿದ್ಯಾರಣ್ಯಪುರ ಸಬ್ ಇನ್ಸ್ ಪೆಕ್ಟರ್ ಶುಕ್ರವಾರ ಬೆಳಿಗ್ಗೆ ಮನೆ ಕಡೆ ತೆರಳುತಿದ್ರು. ಈ ವೇಳೆ ಜಿಕೆವಿಕೆ ಬಳಿ ಶಾಲೆಗೆ ಮಗುವನ್ನು ಕರೆದೊಯ್ಯುತಿದ್ದ ತಾಯಿ ಅಡ್ಡಗಟ್ಟಿದ ಎರಡು ಆಟೋದಲ್ಲಿ ಬಂದ ಮೂವರು ಮಹಿಳೆಯರು ಹಾಗೂ ಓರ್ವ ಪುರುಷ ಮಹಿಳೆಯ ಬಳಿ ಇದ್ದ ಮಗುವನ್ನು ಎಳೆದುಕೊಂಡಿದ್ರು. ಬಳಿಕ ಪುರುಷ ತಾನು ಬಂದಿದ್ದ ಆಟೋದಲ್ಲಿ ಮಗುವನ್ನು ಕರೆದೊಯ್ದಿದ್ದ. ಮತ್ತೊಂದೆಡೆ ಇದನ್ನು ಕಂಡ ಸಬ್ ಇನ್ಸ್ ಪೆಕ್ಟರ್ ಕೂಡಲೇ ಹೊಯ್ಸಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸರು ಮತ್ತೊಂದು ಆಟೋದಲ್ಲಿ ಮೂವರು ಮಹಿಳೆಯರು ಸಹಿತ ಆಟೋ ಚಾಲಕನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಆಗ ಮಗು ಕಿಡ್ನಾಪ್ ಕೇಸ್ನ ಸತ್ಯ ಬಯಲಾಗಿದೆ. ಅಸಲಿಗೆ ಮಗುವಿನ ತಾಯಿ ಹಾಗೂ ತಂದೆ ಬೇರೆ ಬೇರೆ ವಾಸವಿದ್ದಾರೆ. ತಾಯಿ ಬಳಿ ಇದ್ದ ಮಗುವನ್ನು ತಂದೆ ಕರೆದೊಯ್ದಿದ್ದಾನಂತೆ. ಆದ್ರೆ ಈ ವಿಚಾರ ಕಿಡ್ನಾಪ್ ರೀತಿ ಕಂಡಿದ್ದು ಪೊಲೀಸರೇ ಒಂದು ಕ್ಷಣ ಟೆನ್ಶನ್ ಆಗಿದ್ದಂತು ಸತ್ಯ.