ಬೆಂಗಳೂರು ;- ಶಿವಾಜಿನಗರದ ಮಸೀದಿಯಲ್ಲಿ ಬಾಂಬ್ ಇದೆ ಎಂದು ಅನಾಮಧೇಯ ಕರೆ ನಿನ್ನೆ ತಡರಾತ್ರಿ ಬಂದಿದ್ದು, ಬೆಂಗಳೂರು ಪೊಲೀಸರು ಬೆಚ್ಚಿ ಬಿದ್ದಿದ್ದಾರೆ.
ಈ ಅನಾಮಧೇಯ ವ್ಯಕ್ತಿ, ಟೆರೆರಿಸ್ಟ್ಗಳು ಶಿವಾಜಿನಗರದ ಆಜಾಂ ಮಸೀದಿಯಲ್ಲಿ ಬಾಂಬ್ ಇಟ್ಟಿದ್ದಾರೆಂದು ಕರೆ ಮಾಡಿದ್ದ.
ರಾತ್ರಿ 10 ಗಂಟೆ ಸುಮಾರಿಗೆ 112ಕ್ಕೆ ಈ ಕರೆ ಬಂದಿದ್ದು, ಬೆಚ್ಚಿಬಿದ್ದಿದ್ದ ಪೊಲೀಸರು ತಕ್ಷಣ ಕಾರ್ಯಾಚರಣೆಗೆ ಇಳಿದಿದ್ದಾರೆ.
ಶಿವಾಜಿನಗರದ ಪೊಲೀಸರು, ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಈ ಸಂದರ್ಭ ಹಿರಿಯ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಂಬ್ ಬೆದರಿಕೆ ಇದ್ದ ಕಾರಣ ಇಡೀ ಮಸೀದಿಯಲ್ಲಿ ಹುಡುಕಾಟ ನಡೆಸಿದ್ದು ಜತೆಗೆ ಬಾಂಬ್ ಸ್ಕ್ವಾಡ್ ಹಾಗೂ ಶ್ವಾನದಳದಿಂದ ಪರಿಶೀಲನೆ ನಡೆಸಿದ್ದಾರೆ. ಕೊನೆಗೆ ಇದು ಸುಳ್ಳು ಮಾಹಿತಿಯ ಪ್ರಕರಣ ಎಂದು ತಿಳಿದುಬಂದಾಗ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ