ಸಾಲ ಪಡೆದವರು ಹಣ ವಾಪಸ್ ನೀಡದ ಕಾರಣಕ್ಕೆ ಮನನೊಂದು ದಂಪತಿ ಆತ್ಮಹತ್ಯೆ..!

ಮೈಸೂರು: ಸ್ನೇಹಿತನೊಬ್ಬನಿಗೆ ಕೊಡಿಸಿದ್ದ ಸಾಲವನ್ನು (Loan) ಆತ ಮರುಪಾವತಿ ಮಾಡದ ಕಾರಣ ವೀಡಿಯೋ ಮಾಡಿಟ್ಟು ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ (Mysuru) ಯರಗನಹಳ್ಳಿಯಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ದಂಪತಿಯನ್ನು ವಿಶ್ವ (34), ಸುಷ್ಮ (28) ಎಂದು ಗುರುತಿಸಲಾಗಿದೆ. ದಂಪತಿ ಶಿವು ಎಂಬಾತನಿಗೆ ಬೇರೊಬ್ಬರಿಂದ 5 ಲಕ್ಷ ರೂ. ಸಾಲ ಕೊಡಿಸಿದ್ದರು. ಈ ಸಾಲವನ್ನು ಶಿವು ತೀರಿಸಿರಲಿಲ್ಲ. ಸಾಲಕೊಟ್ಟವರು ಹಣ ಕೊಡುವಂತೆ ವಿಶ್ವನನ್ನು ಕೇಳುತ್ತಿದ್ದರು ಎಂದು ತಿಳಿದು ಬಂದಿದೆ.

ಇಷ್ಟೇ ಅಲ್ಲದೇ, ಚೋರನಹಳ್ಳಿ ರಾಜಣ್ಣ ಎಂಬಾತನಿಗೆ ವಿಶ್ವ, ತನ್ನ ಚಿನ್ನಾಭರಣ ಕೊಟ್ಟಿದ್ದ. ಆ ಚಿನ್ನವನ್ನು ಮರಳಿ ಕೊಡದೆ ಆತ ಸತಾಯಿಸಿದ್ದ ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕೆ ದಂಪತಿ ಬೇಸತ್ತಿದ್ದರು. ಇದರಿಂದ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಆಲನಹಳ್ಳಿ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Loading

Leave a Reply

Your email address will not be published. Required fields are marked *