ಬೆಂಗಳೂರು: ರಾಜಭವನದಲ್ಲಿಂದು ರಾಜ್ಯಪಾಲರಾದ ಶ್ರೀ ಮಾನ್ಯ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎನ್ ಚೆಲುವರಾಯಸ್ವಾಮಿ ಹಾಗೂ ಶಾಸಕರಾದ ಶ್ರೀ ಪಿ.ಎಂ ನರೇಂದ್ರಸ್ವಾಮಿ, ಶ್ರೀ ರಮೇಶ್ ಬಾಬು ಬಂಡ್ಡಿಸಿದ್ದೇಗೌಡ, ಶ್ರೀ ರವಿಗಣಿಗಾ, ಶ್ರೀ ಕೆ.ಎಂ ಉದಯ್ ಗೌಡ, ಶ್ರೀ ದಿನೇಶ್ ಗೂಳಿಗೌಡ, ಶ್ರೀ ಮಧು ಮಾದೇಗೌಡ ಹಾಗೂ ಮಾಜಿ ಶಾಸಕರಾದ ಹೊನ್ನಲಗೆರೆ ಶ್ರೀ ರಾಮಕೃಷ್ಣ, ಶ್ರೀ ಕೆ.ಬಿ ಚಂದ್ರಶೇಖರ್ ರವರ ನಿಯೋಗವು ಭೇಟಿ ಮಾಡಿ ಕೃಷಿ ಅಧಿಕಾರಿಗಳು ಬರೆದಿದ್ದರು ಎನ್ನಲಾದ ನಕಲಿ ಪತ್ರದ ಬಗ್ಗೆ ವಿವರಿಸಿದರು. ಈ ಸಂಬಂಧ ಈಗಾಗಲೇ ಸರ್ಕಾರ ಪ್ರಕಣವನ್ನು ಸಿಐಡಿ ತನಿಖೆಗೆ ವಹಿಸಿರುವ ಬಗ್ಗೆ ರಾಜ್ಯಪಾಲರಿಗೆ ಮಾಹಿತಿ ನೀಡಿದರು..