ತಾಯಿ ಮೇಲಿರುವ ಸಿಟ್ಟಿಗೆ ಬುರ್ಕಾ ಧರಿಸಿ ಸ್ವಂತ ಮನೆಗೆ ಕನ್ನ ಹಾಕಿದ ಮಗಳು


ನವದೆಹಲಿ: ತಾಯಿ (Mother) ತನ್ನ ಸಹೋದರಿಯನ್ನೇ ಹೆಚ್ಚು ಪ್ರೀತಿಸುತ್ತಾರೆ ಎಂದು ಹಿರಿಯ ಮಗಳು ಬುರ್ಕಾ (Burqa) ಧರಿಸಿ ಸ್ವಂತ ಮನೆಗೆ ಕನ್ನ ಹಾಕಿರುವ ಘಟನೆ ದೆಹಲಿಯ ಉತ್ತಮ್ ನಗರದಲ್ಲಿ ನಡೆದಿದೆ. ಶ್ವೇತ (31) ಕಳ್ಳತನ ಮಾಡಿದ ಪುತ್ರಿ. ಜನವರಿ 30 ರಂದು ಕಮಲೇಶ್ ಎಂಬ ಮಹಿಳೆ, ದೆಹಲಿಯ ಉತ್ತಮ್ ನಗರದಲ್ಲಿರುವ ತನ್ನ ಸೇವಕ್ ಪಾರ್ಕ್ ಮನೆಯಲ್ಲಿ ದರೋಡೆಯಾಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಳು. ಮಧ್ಯಾಹ್ನ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಮತ್ತು 25,000 ರೂ. ನಗದನ್ನು ಕಳವು ಮಾಡಲಾಗಿದೆ ಎಂದು ದೂರು ನೀಡಿದ್ದರು. ಪೊಲೀಸರು ಶೋಧ ಕಾರ್ಯ ನಡೆಸಿದ್ದಾಗ ಪ್ರಕರಣ ಬಯಲಾಗಿದೆ.

 ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾಗ ಬುರ್ಕಾದಲ್ಲಿ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮನೆಗೆ ಪ್ರವೇಶಿಸಿರುವುದು ಗಮನಕ್ಕೆ ಬಂದಿದೆ. ಬಳಿಕ ತನಿಖೆ ಮಾಡಿದ್ದಾಗ ಕಮಲೇಶ್ ಅವರ ಹಿರಿಯ ಮಗಳು ಶ್ವೇತಾ ಕಳ್ಳತನ ಮಾಡಿರುವುದು ತಿಳಿದು ಬಂದಿದೆ. ಶ್ವೇತ ತಾಯಿ ಆಕೆಯ ತಂಗಿಯನ್ನು ಹೆಚ್ಚು ಪ್ರೀತಿಸುತ್ತಿದ್ದರು. ತಂಗಿ ಹಾಗೂ ತಾಯಿ ಮೇಲಿದ್ದ ಅಸೂಯೆ ಮತ್ತು ದ್ವೇಷದ ಭಾವನೆಗಳಿಂದ ಈ ಕೆಲಸ ಮಾಡಿದ್ದು, ಸ್ವಲ್ಪ ಸಾಲವನ್ನು ಸಹ ಮಾಡಿಕೊಂಡಿದ್ದಳು. ಬಾಕಿಯನ್ನು ತೀರಿಸಲು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾಳೆ. ಕದ್ದಿರುವ ಆಭರಣಗಳಲ್ಲಿ ಕೆಲವು ಅವಳದಾಗಿದ್ದು, ಉಳಿದ ಅಭರಣಗಳು ಆಕೆ ತಂಗಿಯ ಮದುವೆಗೆಂದು ತಾಯಿ ಮಾಡಿಸಿದ್ದರು.

ನಡೆದಿದ್ದೇನು?
ಕಮಲೇಶ್ ತನ್ನ ಹಿರಿಯ ಮಗಳಿಗೆ ಹೊಸ ಮನೆಯನ್ನು ನಿರ್ಮಿಸಲು ಸಹಾಯ ಮಾಡಿದ್ದಾರೆ. ಶ್ವೇತಾ ಮೊದಲು ತನ್ನ ತಾಯಿಯ ಮನೆಯ ಕೀಗಳನ್ನು ಕದ್ದು ತರಕಾರಿ ಖರೀದಿಸುವ ನೆಪದಲ್ಲಿ ತನ್ನ ಹೊಸ ಮನೆಯಿಂದ ಹೊರಬಂದಿದ್ದಾಳೆ. ನಂತರ ಸಾರ್ವಜನಿಕ ಶೌಚಾಲಯಕ್ಕೆ ಹೋಗಿ ಬುರ್ಕಾ ಧರಿಸಿ ತಾಯಿ ಮನೆಗೆ ಹೋಗಿದ್ದಾಳೆ. ಬಳಿಕ ಮುಖ್ಯ ಬಾಗಿಲು ಮತ್ತು ಬೀರು ಲಾಕರ್ ತೆಗೆದು ಚಿನ್ನಾಭರಣ ಮತ್ತು ನಗದು ಹಣವನ್ನು ತೆಗೆದುಕೊಂಡು ಓಡಿಹೋಗಿ, ಕದ್ದ ಚಿನ್ನವನ್ನು ಮಾರಾಟ ಮಾಡಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಶ್ವೇತಾಳನ್ನು ಪೊಲೀಸರು ಬಂಧಿಸಿದ್ದಾರೆ.

Loading

Leave a Reply

Your email address will not be published. Required fields are marked *