ಹಿಂದಿಯ ಮಾಜಿ ಬಿಗ್ ಬಾಸ್ ಸ್ಪರ್ಧಿ ಅಬ್ದು ರೋಜಿಕ್ ವಿರುದ್ಧ ಶಸ್ತ್ರಾಸ್ತ್ರ ಕಾಯ್ಡೆಯಡಿ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಮೂಲಕ ಅಬ್ದು ರೋಜಿಕ್ ಗೆ ತಲೆನೋವು ಶುರುವಾಗಿದೆ.
ಇತ್ತೀಚಿಗೆ ಹೋಟೆಲ್ ಒಂದರಲ್ಲಿ ಅಬ್ದು ಲೋಡ್ ಆಗಿರುವ ಬಂದೂಕೊಂದನ್ನು ಹಿಡಿದುಕೊಂಡು ಪೋಸ್ ನೀಡುತ್ತಾ ಆಟವಾಡುತ್ತಿದ್ದರು.
ಈ ವಿಡಿಯೋ ವೈರಲ್ ಆದ ಬೆನ್ನಲ್ಲೆ ಮುಂಬೈ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯಡಿ ಅಬ್ದು ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಅಬ್ದು ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಅಬ್ದು ಕೈಗೆ ಲೋಡೆಡ್ ಬಂದೂಕು ಸಿಗಲು ಗೋಲ್ಡನ್ ಬ್ರದರ್ಸ್ ಎಂದೇ ಖ್ಯಾತಿಯಾಗಿರುವ ಸನ್ನಿ- ಸಂಜಯ್ ಕಾರಣ ಎನ್ನಲಾಗುತ್ತಿದೆ. ಸನ್ನಿ-ಸಂಜಯ್ ಅವರುಗಳ ಬಾಡಿಗಾರ್ಡ್‌ಗಳ ಬಂದೂಕು ಹಿಡಿದುಕೊಂಡು ಅಬ್ದು ಪೋಸ್ ನೀಡಿದ್ದರು. ಇದನ್ನ ವಿಡಿಯೋ ಮಾಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಶಸ್ತ್ರಾಸ್ತ್ರ ಕಾಯ್ದೆಯನ್ವಯ ಯಾವ ವ್ಯಕ್ತಿಯ ಬಳಿ ಬಂದೂಕಿನ ಪರವಾನಗಿ ಇರುತ್ತದೆಯೋ ಆ ವ್ಯಕ್ತಿಯ ಹೊರತಾಗಿ ಇನ್ಯಾರೂ ಬಂದೂಕು ಮುಟ್ಟುವಂತಿಲ್ಲ. ಹಾಗಾಗಿ ಈಗ ಅಬ್ದು ಹಾಗೂ ಬಂದೂಕಿನ ಪರವಾನಗಿ ಹೊಂದಿದ್ದ ಗೋಲ್ಡನ್ ಬ್ರದರ್ಸ್ರ ಬಾಡಿಗಾರ್ಡ್ ವಿರುದ್ಧ ಮುಂಬೈನ ಓಶಿವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.