ತುಮಕೂರು;- ಬಸ್ ನಲ್ಲಿದ್ದಾಗಲೇ ಉಸಿರಾಟದ ಸಮಸ್ಯೆ ಬಂದ ಹಿನ್ನೆಲೆ, ಮಹಿಳೆ ನೆರವಿಗೆ ಕಂಡಕ್ಟರ್, ಡ್ರೈವರ್ ಧಾವಿಸಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಗೆ ಸರ್ಕಾರಿ ಬಸ್ ಚಾಲಕ ಹಾಗೂ ನಿರ್ವಾಹಕ ಕರುಣಾಮಯಿ ಆಗಿದ್ದಾರೆ.
ರಾಯಚೂರಿನಿಂದ ಬೆಂಗಳೂರಿಗೆ ಸರ್ಕಾರಿ ಬಸ್ ಹೋಗುತ್ತಿತ್ತು. ಬಸ್ ನಲ್ಲಿದ್ದ ಸುಮಾರು 47 ವರ್ಷದ ಮಹಿಳೆಗೆ ಶ್ವಾಸಕೋಶದ ಸಮಸ್ಯೆ ಯಿಂದ ಉಸಿರಾಟ ಏರುಪೇರ ಯಾಗಿದೆ. ಇದನ್ನ ಕಂಡ ಚಾಲಕ ಶಾಂತಪ್ಪ ಕೂಡಲೇ ಆಸ್ಪತ್ರೆಯತ್ತ ಸಾಗಿದ್ದಾರೆ. ತುಮಕೂರಿನ ಶಿರಾ ಗೇಟ್ ಸಮೀಪದ ಶ್ರೀ ದೇವಿ ಆಸ್ಪತ್ರೆಗೆ ದಾಖಲಿಸಿ ಮೆರೆದ ಸರ್ಕಾರಿ ಬಸ್ ಚಾಲಕ ಮಾನವೀಯತೆ ಮೆರೆದಿದ್ದಾರೆ.ತಡರಾತ್ರಿ ಈ ಘಟನೆ ನಡೆದಿದ್ದು, ಬಸ್ ಚಾಲಕನ ಕೆಲಸಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.