ಹಲವಾರು ರೀತಿಯ ಚಹಾಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿದೆ. ವಿವಿಧ ರೀತಿಯ ಗಿಡಮೂಲಿಕೆ ಚಹಾಗಳು ನಾವಿಂದು ಸೇವಿಸಬಹುದಾಗಿದೆ. ಗಿಡಮೂಲಿಕೆ ಚಹಾದಲ್ಲಿ ಸಿಗುವಂತಹ ಆರೋಗ್ಯ ಲಾಭಗಳು ಬೇರೆಲ್ಲೂ ಸಿಗಲಾರದು. ಗಿಡಮೂಲಿಕೆ ಚಹಾ ವಾಕರಿಕೆ, ಮಲಬದ್ಧತೆ, ಅಜೀರ್ಣ ಇತ್ಯಾದಿ ಸಮಸ್ಯೆ ನಿವಾರಣೆ ಮಾಡಲು ತುಂಬಾ ಸಹಕಾರಿ ಆಗಿರುವುದು. ಗಿಡಮೂಲಿಕೆ ಚಹಾ ಇಂದು ಹೆಚ್ಚಿನ ಕಡೆಗಳಲ್ಲಿ ಲಭ್ಯವಿದೆ ಮತ್ತು ಇದನ್ನು ತಯಾರಿಸಿಕೊಳ್ಳುವುದು ತುಂಬಾ ಸುಲಭ. ಇಲ್ಲಿ ಐದು ರೀತಿಯ ಗಿಡಮೂಲಿಕೆಚಹಾದಿಂದ ದೇಹದ ಆಗುವ ಲಾಭಗಳ ಬಗ್ಗೆ ತಿಳಿಸಿಕೊಡಲಿದ್ದೇವೆ.
ಪುದೀನಾ ಚಹಾ
ತಾಜಾತನದ ರುಚಿ ಹೊಂದಿರುವಂತಹ ಪುದೀನಾಚಹಾವು ಒಂದು ಔಷಧೀಯ ಗುಣ ಹೊಂದಿದೆ ಮತ್ತು ಇದು ಹೊಟ್ಟೆಯ ತಳಮಳ ಕಡಿಮೆ ಮಾಡುವುದು. ಪುದೀನಾದಲ್ಲಿ ಇರುವಂತಹ ಮೆಥಾಲ್ ಎನ್ನುವ ಅಂಶವು ಜೀರ್ಣಕ್ರಿಯೆ ಸಮಸ್ಯೆಗೆ ಪರಿಹಾರ ನೀಡುವುದು ಎಂದು ಅಧ್ಯಯನಗಳು ಹೇಳಿವೆ. ಪುದೀನಾ ಎಣ್ಣೆಯು ತುಂಬಾ ಲಾಭಕಾರಿ ಆಗಿರುವುದು. 7-10 ತಾಜಾ ಪುದೀನಾ ಎಲೆಗಳನ್ನು ನೀರಿನಲ್ಲಿ ಹತ್ತು ನಿಮಿಷ ಕಾಲ ಕುದಿಸಿ ಮತ್ತು ಇದರ ಚಹಾ ತಯಾರಿಸಿಕೊಳ್ಳಿ.
ಶುಂಠಿ ಚಹಾ
ಶುಂಠಿಯು ವಾಕರಿಕೆ ಮತ್ತು ವಾಂತಿ ಕಡಿಮೆ ಮಾಡುವುದು ಎಂದು ಸಾಬೀತು ಆಗಿದೆ. ಇದು ಜೀರ್ಣಕ್ರಿಯೆ ಸಮಸ್ಯೆಯನ್ನು ಕೂಡ ನಿವಾರಣೆ ಮಾಡುವುದು. ಶುಂಠಿಚಹಾವನ್ನು ಶುಂಠಿ ಬೇರಿನಿಂದ ತಯಾರಿಸಲಾಗುತ್ತದೆ. ಶುಂಠಿಯಲ್ಲಿ ಇರವ ಕೆಲವು ಅಂಶವು ವಾಕರಿಕೆ, ಸೆಲೇತ, ಉಬ್ಬರ, ವಾಯು ಮತ್ತು ಅಜೀರ್ಣ ಸಮಸ್ಯೆ ನಿವಾರಿಸುವುದು. ಎರಡು ಚಮಚ ಕತ್ತರಿಸಿಕೊಂಡು ಶುಂಠಿಯನ್ನು ಅರ್ಧ ಲೀಟರ್ ನೀರಿಗೆ ಹಾಕಿ 10-20 ನಿಮಿಷ ಕಾಲ ಕುದಿಸಿ.
ಜೆಂಟಿಯನ್ ಬೇರಿನ ಚಹಾ
ಇದೊಂದು ಹೂವಿನ ಸಸ್ಯವಾಗಿದ್ದು, ಇದನ್ನು ಬಳಸಿಕೊಂಡು ಚಹಾ ತಯಾರಿಸಿಕೊಳ್ಳಲಾಗುತ್ತದೆ. ಜೆಂಟಿಯನ್ ಬೇರನ್ನು ಯಾವಾಗಲೂ ಹಸಿವು ಹೆಚ್ಚಿಸಲು ಮತ್ತು ಹೊಟ್ಟೆಯ ಸಮಸ್ಯೆ ನಿವಾರಣೆ ಮಾಡಲು ಹಲವಾರು ಶತಮಾನಗಳಿಂದ ಬಳಸಿಕೊಂಡು ಬರಲಾಗುತ್ತಾ ಇದೆ. ಜೆಂಟಿಯನ್ ಬೇರು ಹಾಕಿದ ನೀರು ಕುಡಿದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆಗೆ ಸರಿಯಾಗಿ ರಕ್ತಸಂಚಾರವಾಗುವುದು ಮತ್ತು ಇದರಿಂದ ಜೀರ್ಣಕ್ರಿಯೆಯು ಸುಧಾರಣೆ ಆಗುವುದು.
ಜೀರಿಗೆ ಚಹಾ
ಜೀರಿಗೆಯು ಹೊಟ್ಟೆಯ ಅಲ್ಸರ್ ನ್ನು ತಡೆಯುವುದು ಎಂದು ಅಧ್ಯಯನಗಳು ಕೂಡ ಕಂಡುಕೊಂಡಿವೆ. ಜೀರಿಗೆಯಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಗುಣದಿಂದಾಗಿ ಇದರಲ್ಲಿ ಈ ಗುಣವಿದೆ. ಇದು ಅಲ್ಸರ್ ಬೆಳೆಯುವುದನ್ನು ತಪ್ಪಿಸುವುದು. ಇದು ಕರುಳಿನ ಕ್ರಿಯೆ ಸರಾಗವಾಗಿಸಿಕೊಂಡು ಮಲಬದ್ಧತೆ ನಿವಾರಣೆ ಮಾಡುವುದು. ಜೀರಿಗೆಯು ವಿರೇಚಕವಾಗಿ ಹೇಗೆ ಕೆಲಸ ಮಾಡುವುದು ಎಂದು ತಿಳಿದುಬಂದಿಲ್ಲ.
ಸೆನ್ನಾ ಚಹಾ
ಸೆನ್ನಾದಲ್ಲಿ ಸೈನೆಡ್ ಎನ್ನುವ ರಾಸಾಯನಿಕವಿದೆ ಮತ್ತು ಇದು ದೊಡ್ಡ ಕರುಳಿನಲ್ಲಿ ವಿಭಜನೆಯಾಗುವುದು ಮತ್ತು ಸ್ನಾಯುಗಳಿಗೆ ಆರಾಮ ನೀಡಿ, ಸಂಕೋಚನಕ್ಕೆ ಉತ್ತೇಜಿಸುವುದು ಮತ್ತು ಕರುಳಿನ ಕ್ರಿಯೆ ಸರಾಗ ಮಾಡುವುದು. ಸೆನ್ನಾಚಹಾದಲ್ಲಿ ಇರುವಂತಹ ವಿರೇಚಕ ಗುಣವು ಮಕ್ಕಳು ಮತ್ತು ದೊಡ್ಡವರಿಗೆ ತುಂಬಾ ಪರಿಣಾಮಕಾರಿ ಆಗಿರುತ್ತದೆ ಎಂದು ಹೇಳಲಾಗುತ್ತದೆ. ಸೆನ್ನಾ ಚಹಾ ತುಂಬಾ ಪರಿಣಾಮಕಾರಿ ಮತ್ತು ಮಲಬದ್ಧತೆ ನಿವಾರಿಸಲು ಹೆಚ್ಚು ಸಹಕರಿಸುವುದು