ಬೆಂಗಳೂರು: ಇವರು ರಾಮಾಯಣ ಅನ್ವೇಷಣೆ ಮಾಡಿದವರು, ಪ್ರಶಸ್ತಿ ಸಹ ಸಿಕ್ಕಿದೆ. ಟ್ರಿಬ್ಯುನಲ್ನಿಂದ ಹೇಗೆ ಮಾರಕ ಆಯಿತು ಅಂತ ಅವರಿಗೆ ಗೊತ್ತಿದೆ. ಕಾವೇರಿ ಟ್ರಿಬ್ಯುನಲ್ ರಚನೆಗೆ ಈ ಮಹಾನುಭಾವನ ಕೊಡುಗೆ ಏನು ಎಲ್ಲಾ ಪ್ರಾಜೆಕ್ಟ್ ಮಾಡಿದ್ದು ನಾನೇ ಅಂತ ವೀರಪ್ಪ ಮೊಯ್ಲಿ ಹೇಳಿದ್ದಾರೆ. ನೀರು ಬಿಡಲ್ಲ ಅಂತ ಏಕೆ ಸುಪ್ರೀಂಕೋರ್ಟ್ ಗೆ ಮೊದಲೇ ಹೇಳಿಲ್ಲ. ರಾಜ್ಯ ಸರ್ಕಾರವು ಈ ವ್ಯಕ್ತಿಯನ್ನು ಕರೆದು ಸಲಹೆ ಪಡೆದುಕೊಳ್ಳಲಿ. ಕುವೆಂಪುಗಿಂತ ಹೆಚ್ಚಾಗಿ ಅನ್ವೇಷಣೆ ಮಾಡಿದವರು ವೀರಪ್ಪ ಮೊಯ್ಲಿ. ಇಂತಹವರ ಮಧ್ಯೆ ನಾವೇನು ಸಲಹೆ ಕೊಡಲಿ. ಸರ್ಕಾರಕ್ಕೆ ರಾಜ್ಯದ ಜನರ ಹಿತ ಕಾಪಾಡುವ ತಾಕತ್ತು, ಧಮ್ ಇಲ್ಲ. ವೀರಪ್ಪ ಮೊಯ್ಲಿ ಸಲಹೆ ಪಡೆದು ಉದ್ಧಾರ ಮಾಡಿ ನೋಡೋಣ ಎಂದು ಮಣ್ಣಿನ ಮಕ್ಕಳಿಂದ ಕಾವೇರಿ ನೀರು ದ್ರೋಹ ಆಗಿದೆ ಎಂಬ ವೀರಪ್ಪ ಮೊಯ್ಲಿ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.