ಯುದ್ಧಭೂಮಿ ಸುಡಾನ್​​ ನಿಂದ ಮುಂಬಯಿಗೆ ಬಂದ 231 ಭಾರತೀಯರು

ವದೆಹಲಿಸುಡಾನ್‌ನಲ್ಲಿ ಸೇನಾ ಘರ್ಷಣೆ ಪ್ರಾರಂಭವಾಗುತ್ತಿದ್ದಂತೇ ʻOperation Kaveriʼ ಅಲ್ಲಿದ್ದ ಭಾರತೀಯರನ್ನು ತನ್ನ ದೇಶಕ್ಕೆ ಕರೆತರುತ್ತಿದೆ. ಇದೀಗ 12 ನೇ ವಿಮಾನವು 231 ಭಾರತೀಯರನ್ನು ಸೌದಿ ಅರೇಬಿಯಾದ ಜೆಡ್ಡಾದಿಂದ ಮುಂಬೈಗೆ ಕರೆತರುತ್ತಿದೆ.

ಈ ಮೂಲಕ ಭಾರತವು ಯುದ್ಧ ಪೀಡಿತ ಸುಡಾನ್‌ನಲ್ಲಿ(Sudan crisis) ಸಿಲುಕಿರುವ ತನ್ನ ನಾಗರಿಕರನ್ನು ಮರಳಿ ಕರೆತರುವ ಪ್ರಯತ್ನಗಳನ್ನು ಮುಂದುವರೆಸಿದೆ.

ಮಂಗಳವಾರ ರಕ್ಷಣಾ ಕಾರ್ಯಾಚರಣೆಯ ಅಡಿಯಲ್ಲಿ ಒಟ್ಟು 559 ಜನರನ್ನು ಕರೆತರಲಾಯಿತು. ಅದರಲ್ಲಿ 231 ಭಾರತೀಯರು ಅಹಮದಾಬಾದ್‌ಗೆ ಆಗಮಿಸಿದರು ಮತ್ತು ಉಳಿದ 328 ನಾಗರಿಕರನ್ನು ನವದೆಹಲಿಗೆ ಕರೆತರಲಾಯಿತು. ಇದರೊಂದಿಗೆ ಸ್ಥಳಾಂತರಗೊಂಡವರ ಸಂಖ್ಯೆ 3,000 ಮೀರಿದೆ ಎಂದು ಸುಡಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

Loading

Leave a Reply

Your email address will not be published. Required fields are marked *