ವಿಜಯಪುರ: ನಟ ಪ್ರಕಾಶ್ ರಾಜ್ (Prakash Raj) ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕಾಶ್ ರಾಜ್ ಹಂದಿ ಇದ್ದ ಹಾಗೇ. ಪ್ರಕಾಶ್ ರಾಜ್ ಎನ್ನುವ ಹಂದಿ ನಮ್ಮ ರಾಜ್ಯದಲ್ಲಿದೆ ಎಂದು ಕಿಡಿಕರಿದ್ದಾರೆ.
ವಾಗ್ದಾಳಿ ಯಾಕೆ..?; ಇತ್ತೀಚೆಗೆ ಕಲಬುರಗಿಯಲ್ಲಿ ಮಾತನಾಡಿದ್ದ ಪ್ರಕಾಶ್ ರಾಜ್, ಸನಾತನ ಧರ್ಮದ ಬಗ್ಗೆ ಮಾತನಾಡುವವರನ್ನು ಕಾಗೆಗಳಿಗೆ ಹೋಲಿಕೆ ಮಾಡಿದ್ದರು. ಸನಾತನ ಧರ್ಮ ಅಂದ್ರೆ ಏನು ಅಂತಾ ಪ್ರಶ್ನಿಸಿದಾಗ, ಮನುಷ್ಯ ಬದಲಾಗುವುದಿಲ್ಲ ನಾನು ಎನ್ನುವುದು ಪ್ರಕೃತಿಗೆ ವಿರುದ್ಧ ನಾನೇ ಶ್ರೇಷ್ಠ ಅಂತಾನೆ. ಸದ್ಯ ಕಾಗೆಗಳು ಹೆಚ್ಚಾಗಿ ಸೇರಿಕೊಂಡು ಕೋಗಿಲೆ, ನವಿಲು ಸಹ ನಮ್ಮ ಮಾತು ಕೇಳಬೇಕು ಎನ್ನುವ ಮಾತು ಆಡುತ್ತಿದ್ದಾರೆ. ಈ ಮೂಲಕ ಸನಾತನ ಧರ್ಮದ ಬಗ್ಗೆ ಇವರು ದಾರಿ ತಪ್ಪಿಸಲು ತರುತ್ತಿದ್ದಾರೆ ಎಂದು ಹೇಳಿದ್ದರು.