ಸರಿಯಾದ ಚಯಾಪಚಯ ಕ್ರಿಯೆಗೆ ಆರೋಗ್ಯಕರ ಉಪಹಾರ (ಬ್ರೇಕ್ ಫಾಸ್ಟ್) ಸೇವಿಸುವುದು ಅತ್ಯಗತ್ಯ. ದಿನವನ್ನು ಊಟದಿಂದ ಪ್ರಾರಂಭಿಸುವುದು ಉತ್ತಮವಲ್ಲ. ನಾವು ದೀರ್ಘ ಗಂಟೆಗಳ ನಿದ್ರೆಯಿಂದ ಎದ್ದ ನಂತರ ಎರಡು ಗಂಟೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ತಿಂಡಿ ಸೇವಿಸಬೇಕು ಎಂದು ಆಹಾರ ತಜ್ಞರು ಶಿಫಾರಸು ಮಾಡುತ್ತಾರೆ. ಈ ಲೇಖನದಲ್ಲಿ, ಖಾಲಿ ಹೊಟ್ಟೆಯಲ್ಲಿ ಖರ್ಜೂರ ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ವಿವರಿಸಲಾಗಿದೆ.
ರಕ್ತದೊತ್ತಡ ನಿಯಂತ್ರಿಸುತ್ತದೆ
ಖರ್ಜೂರದಲ್ಲಿ ಪೊಟ್ಯಾಶಿಯಂ ಸಮೃದ್ಧವಾಗಿದ್ದು, ಖನಿಜವು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು ಖರ್ಜೂರ ಸುಮಾರು 167 ಮಿಗ್ರಾಂ ಪೊಟ್ಯಾಶಿಯಂ ಹೊಂದಿರುತ್ತದೆ. ಇತರ ಹಣ್ಣುಗಳಿಗೆ ಹೋಲಿಸಿದರೆ ಇದರಲ್ಲಿ ಪೊಟ್ಯಾಶಿಯಂ ಹೆಚ್ಚು. ಸಾಕಷ್ಟು ಪೊಟ್ಯಾಶಿಯಮ್ ತೆಗೆದುಕೊಳ್ಳದಿದ್ದರೆ ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು. ಖರ್ಜೂರದಲ್ಲಿರುವ ಮೆಗ್ನೀಶಿಯಮ್ ನಿಮ್ಮ ಹೃದಯ ಮತ್ತು ರಕ್ತನಾಳಗಳಲ್ಲಿನ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಇದರ ಪರಿಣಾಮವಾಗಿ ರಕ್ತದೊತ್ತಡ ಕಡಿಮೆಯಾಗುತ್ತದೆ.
ಹೃದಯದ ಆರೋಗ್ಯಕ್ಕೆ
ಖರ್ಜೂರದಲ್ಲಿ ಐಸೊಫ್ಲೇವನ್ ಇರುತ್ತದೆ. ಇದು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಯುಕೆ ಅಧ್ಯಯನದ ಪ್ರಕಾರ ಖರ್ಜೂರ ನಿಯಮಿತವಾಗಿ ಸೇವಿಸುವುದರಿಂದ ಪರಿಧಮನಿಯ ಹೃದಯ ಕಾಯಿಲೆ ಬರದಂತೆ ತಡೆಗಟ್ಟಿದೆ. ಫೈಬರ್ ತೂಕ ನಿರ್ವಹಣೆಗೆ ಸಹ ಸಹಾಯ ಮಾಡುತ್ತದೆ.
ಕೊಲೆಸ್ಟ್ರಾಲ್ ನಿಯಂತ್ರಿಸಲು
ಇಸ್ರೇಲಿ ಅಧ್ಯಯನದ ಪ್ರಕಾರ ಆರೋಗ್ಯಕರ ವ್ಯಕ್ತಿಗಳು ಸಹ ಖರ್ಜೂರ ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟ ಮತ್ತು ಆಕ್ಸಿಡೇಟಿವ್ ಒತ್ತಡದ ಮೇಲೆ ಪ್ರಯೋಜನಕಾರಿ ಪರಿಣಾಮಗಳನ್ನು ಬೀರುತ್ತದೆ. ಖರ್ಜೂರದಲ್ಲಿ ಯಾವುದೇ ಕೊಲೆಸ್ಟ್ರಾಲ್ ಇರುವುದಿಲ್ಲ. ಅವು ಕಬ್ಬಿಣದಿಂದ ಕೂಡಿದ್ದು, ಬಾಳೆಹಣ್ಣಿಗಿಂತ ಹೆಚ್ಚು ಫೈಬರ್ ಹೊಂದಿರುತ್ತವೆ.
ಮೂಳೆಗಳನ್ನು ಆರೋಗ್ಯವಾಗಿಡಲು
ಖರ್ಜೂರದಲ್ಲಿ ತಾಮ್ರ, ಮೆಗ್ನೀಶಿಯಂ, ಸೆಲೆನಿಯಮ್ , ಮ್ಯಾಂಗನೀಸ್ ಸಮೃದ್ಧವಾಗಿದೆ. ಇವೆಲ್ಲವೂ ನಮ್ಮ ಎಲುಬುಗಳನ್ನು ಆರೋಗ್ಯವಾಗಿಡಲು ಮತ್ತು ಆಸ್ಟಿಯೊಪೊರೋಸಿಸ್ ನಂತಹ ಮೂಳೆ ಸಂಬಂಧಿತ ಕಾಯಿಲೆ ಗಳನ್ನು ತಡೆಯಲು ಸಹಾಯ ಮಾಡುತ್ತದೆ. ಖರ್ಜೂರ ಮೂಳೆಗಳಿಗೆ ಆರೋಗ್ಯಕರವಾದ ಬೋರಾನ್ ಸಹ ಒಳಗೊಂಡಿದೆ.
ಶಕ್ತಿ ಹೆಚ್ಚಿಸುತ್ತದೆ
ಖರ್ಜೂರದ ಹಣ್ಣು ನಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುವ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ಸುಕ್ರೋಸ್, ಫ್ರಕ್ಟೋಸ್ ಮತ್ತು ಗ್ಲೂಕೋಸ್ನಂತಹ ನೈಸರ್ಗಿಕ ಸಕ್ಕರೆಗಳನ್ನು ಸಹ ಒಳಗೊಂಡಿದೆ.
ದೇಹದ ತೂಕ ಹೆಚ್ಚಲು
ಕುರಿಮರಿಗಳ ಮೇಲೆ ನಡೆಸಿದ ಅಧ್ಯಯನದ ಪ್ರಕಾರ, ಖರ್ಜೂರ ಸೇವಿಸಿದ ನಂತರ ತೂಕ ಹೆಚ್ಚಾಗಿರುವುದು (30% ರಷ್ಟು) ಕಂಡುಬಂದಿದೆ. ಹೆಚ್ಚಿನ ಸಂಶೋಧನೆಯ ಅಗತ್ಯವಿದ್ದರೂ ಮಾನವರು ಸಹ ಖರ್ಜೂರ ಸೇವಿಸಿದಾಗ ದೇಹದ ತೂಕ ಹೆಚ್ಚಾಗಿರುವುದು ಕಂಡುಬಂದಿದೆ.
ಪುರುಷರ ಫಲವತ್ತತೆ ಹೆಚ್ಚಲು
ಭಾರತೀಯ ಅಧ್ಯಯನದ ಪ್ರಕಾರ ಪುರುಷ ಫಲವತ್ತತೆ ಹೆಚ್ಚಲು ಖರ್ಜೂರ ಬಳಸಲಾಗುತ್ತದೆ. ಅತಿಸಾರ ಗುಣಪಡಿಸಲು ಕೆಲವು ವರದಿಗಳ ಪ್ರಕಾರ ಖರ್ಜೂರ ಸೇವಿಸುವುದರಿಂದ ಅತಿಸಾರ ಗುಣವಾಗುತ್ತದೆ. ಪೊಟ್ಯಾಶಿಯಮ್ ಖರ್ಜೂರ ದಲ್ಲಿ ಅಧಿಕವಾಗಿರುವುದರಿಂದ ಅತಿಸಾರ ಸುಧಾರಿಸಲು ಸಹಾಯ ಮಾಡುತ್ತದೆ.
ಕೊಲೊನ್ ಕ್ಯಾನ್ಸರ್ ತಡೆಗಟ್ಟಲು
ಖರ್ಜೂರ ಸೇವಿಸುವುದರಿಂದ ಕೊಲೊರೆಕ್ಟಲ್ ಕ್ಯಾನ್ಸರ್ ಬೆಳವಣಿಗೆ ಕಡಿಮೆ ಮಾಡಬಹುದು. ಖರ್ಜೂರ ಸೇವನೆಯು ಕರುಳಿನಲ್ಲಿ ಪ್ರಯೋಜನಕಾರಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಇದು ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ.
ಮಲ ಮೃದುವಾಗುತ್ತದೆ
ಅಧ್ಯಯನದ ಪ್ರಕಾರ ಖರ್ಜೂರವು ಮಲಬದ್ಧತೆ ಆಗದಂತೆ ಸಹಾಯ ಮಾಡುತ್ತದೆ. ಫೈಬರ್ ಅಸಮರ್ಪಕ ಸೇವನೆಯು ಮಲಬದ್ಧತೆಗೆ ಕಾರಣವಾಗಬಹುದು. ಆದರೆ ಖರ್ಜೂರ ನಾರಿನ ಉತ್ತಮ ಮೂಲ ವಾಗಿರುವುದರಿಂದ ಈ ಸಮಸ್ಯೆಯನ್ನು ಪರಿಹರಿಸಬಹುದು. ಪ್ರತಿದಿನ ಕನಿಷ್ಠ 20 ರಿಂದ 35 ಗ್ರಾಂ ಫೈಬರ್ ತಿನ್ನುವುದರಿಂದ ನಿಮ್ಮ ಮಲ ಮೃದುವಾಗುತ್ತದೆ.
ಆರೋಗ್ಯಕರ ಗರ್ಭಧಾರಣೆಗೆ
ಖರ್ಜೂರ ಸೇವಿಸುವುದರಿಂದ ಗರ್ಭಧಾರಣೆಯ ಸಮಯದಲ್ಲಿ ಉಂಟಾಗುವ ಮೂಲವ್ಯಾಧಿಯನ್ನು ತಡೆಯುತ್ತದೆ. ಗರ್ಭಧಾರಣೆಯ ಕೊನೆಯ ತಿಂಗಳುಗಳಲ್ಲಿ ಗರ್ಭಾಶಯದ ಸ್ನಾಯುಗಳನ್ನು ಬಲಪಡಿಸಲು ಖರ್ಜೂರ ಸಹಾಯ ಮಾಡುತ್ತದೆ.