2,000 ದಾಟಿದ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ: 7.2 ತೀವ್ರತೆ

ರಬತ್: ಮೊರಾಕ್ಕೋ (Morocco) ಭೀಕರ ಭೂಕಂಪಕ್ಕೆ (Earthquake) 2,012ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, 2,059 ಜನ ಗಾಯಗೊಂಡಿದ್ದಾರೆ. ಇದರಲ್ಲಿ 1,404 ಮಂದಿ ಗಂಭೀರ ಪರಿಸ್ಥಿತಿಯಲ್ಲಿದ್ದಾರೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ. ವಸತಿ ಕಳೆದುಕೊಂಡವರು ಸಿಕ್ಕ ಜಾಗದಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದಾರೆ.

ಅವರ ರಕ್ಷಣೆಗಾಗಿ ಶ್ರಮಿಸಲಾಗುತ್ತಿದೆ. ಐತಿಹಾಸಿಕ ಕಟ್ಟಡಗಳೂ ಸೇರಿದಂತೆ ಮಸೀದಿ ಹಾಗೂ ಮನೆಗಳು ಉರುಳಿಬಿದ್ದಿವೆ. ಇವುಗಳ ಅವಶೇಷಗಳ ಅಡಿ ಹಲವಾರು ಜನ ಸಿಲುಕಿ ಮೃತಪಟ್ಟಿದ್ದಾರೆ. ಶವಗಳನ್ನು ಹೊರ ತೆಗೆಯುವ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ತಡರಾತ್ರಿ ಸಂಭವಿಸಿದ ಭೂಕಂಪದಿಂದ ಈ ಮಟ್ಟದ ಹಾನಿ ಸಂಭವಿಸಿದೆ. ಈ ಭೂಕಂಪ 6.8 ರಷ್ಟು ತೀವ್ರತೆ ಹೊಂದಿತ್ತು. ಭೂಕಂಪದ ಕೇಂದ್ರಬಿಂದು ಮಾರಾಕೆಚ್ನ ನೈಋತ್ಯಕ್ಕೆ 72 ಕಿಮೀ ದೂರದಲ್ಲಿದೆ. ಭೂಕಂಪವು 18.5 ಕಿಮೀ ಆಳದಲ್ಲಿ ಆಗಿರುವುದು ದಾಖಲಾಗಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ. ಈ ದುರಂತದಲ್ಲಿ ಸಂಬಂಧಿಗಳನ್ನು ಕಳೆದುಕೊಂಡ ಜನ ದುಃಖದಲ್ಲಿ ಕಣ್ಣೀರಿಡುವ ದೃಶ್ಯಗಳು ಎಲ್ಲಾ ಕಡೆ ಕಾಣುತ್ತಿದೆ.

ಮಕ್ಕಳನ್ನು ಕಳೆದುಕೊಂಡ ತಾಯಿ ಅವರ ಹುಡುಕಾಟದಲ್ಲಿ ಅಲೆಯುವ ದೃಶ್ಯಗಳು ಕರುಳು ಹಿಂಡುವಂತಿವೆ. ಅಲ್ಲದೇ ಆಹಾರ ಹಾಗೂ ಸರಿಯಾದ ಕುಡಿಯುವ ನೀರು ಜನರಿಗೆ ಸಿಗುತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದರ ನಡುವೆ ಅವಶೇಷಗಳ ಅಡಿ ಸಿಲುಕಿದವರ ರಕ್ಷಣಾ ಕಾರ್ಯಗಳು ನಡೆಯುತ್ತಿದೆ. ನೀರು ಹಾಗೂ ಆಹಾರದ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Loading

Leave a Reply

Your email address will not be published. Required fields are marked *