ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ದಿನೇ ದಿನೇ ಕಳ್ಳರ ಕೈ ಚಳಕ ಜೋರಾಗುತ್ತಿದ್ದು ಚಿನ್ನಾ, ಬೆಳ್ಳಿ, ಬೈಕ್ ಹೀಗೆ ಒಂದೊಂದೆ ಕದಿಯುತ್ತಿದ್ದ ಕಳ್ಳರ ಗ್ಯಾಂಗ್ ಈಗ ಶು ಕಳ್ಳ ದಂಧೆಗೆ ಇಳಿದಿದ್ದು ನಗರದಲ್ಲಿ ಶೂ ಕಳ್ಳರ ಹಾವಳಿ ಹೆಚ್ಚಾಗಿದ್ದು ಕಳ್ಳರನ್ನು ಹಿಡಿಯಲು ಪೊಲೀಸ್ ಪಡೆ ಮುಂದಾಗಿದೆ. ನಗರದ ಬಾಗಲುಗುಂಟೆಯಲ್ಲಿ ಮುಂದುವರಿದ ಶೂ ಕಳ್ಳರ ಹಾವಳಿ ಹೆಚ್ಚಾಗಿದ್ದು ಉದ್ಯಮಿ ಲಕ್ಕಣ್ಣ, ನಾರಯಣ್ ಎಂಬುವವರ ಮನೆಯಲ್ಲಿ ಶೂ ಕಳ್ಳತನವಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಚೀಲ ಹಿಡಿದು ಬಂದ ಇಬ್ಬರು ದುಷ್ಕರ್ಮಿಗಳಿಂದ ಕೃತ್ಯ ಬಯಲಾಗಿದೆ.
ಟಿ.ದಾಸರಹಳ್ಳಿಯ ಶೆಟ್ಟಿಹಳ್ಳಿಯ ಲೇಕ್ ವ್ಯೂ ಬಡಾವಣೆ ಹಾಗೂ ಬಾಗಲುಗುಂಟೆಯಲ್ಲಿ ಕಳ್ಳರ ಕೈ ಚಳಕ ಕಂಡು ಬಂದಿದ್ದು ಹಾಗೆ 5ಕ್ಕೂ ಹೆಚ್ಚು ಮನೆಯಲ್ಲಿ ಶೂ ಕಳ್ಳತನ ಮಾಡಿರುವ ದುಷ್ಕರ್ಮಿಗಳು
ಕಳ್ಳರ ಕೃತ್ಯ ಸಿಸಿಕ್ಯಾಮಾರದಲ್ಲಿ ಸೆರೆಯಾಗಿದ್ದು ಶೂ ಕಳ್ಳರ ಪತ್ತೆಗಾಗಿ ಬಾಗಲುಗುಂಟೆ ಪೊಲೀಸರಿಂದ ಶೋಧ ಕಾರ್ಯನಡೆಯುತ್ತಿದ್ದು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.